ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸೊಳ್ಳೆಗಳು ವಿಪರೀತವಾಗಿ ಹೆಚ್ಚಾಗಿರುವ ಕಾರಣ ಶೃಂಗೇರಿಯಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ, ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಡೆಂಗ್ಯೂ ನಿಂದ ಬಳಲುತ್ತಿದ್ದು, ಅದರಲ್ಲಿ ಕೆಲವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿ ಮಣಿಪಾಲ, ಮಂಗಳೂರು ದಾಖಲಾಗಿದ್ದಾರೆ.
ಇದನ್ನೂ ಓದಿ: 400 ರೂಪಾಯಿಗೆ LPG, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್

ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸೊಳ್ಳೆಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕೆ ಪಂಚಾಯಿತಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ಹಾಗೆಯೇ ಕಟ್ಟೆಬಾಗಿಲು ಸಮೀಪ ಮತ್ತು ಇತರೆಡೆ ಡ್ರೈನೇಜ್ ಸಮಸ್ಯೆ ಇದ್ದು ಅದನ್ನು ಸಹ ಸರಿಪಡಿಸುತ್ತಿಲ್ಲ.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದು ಸೇರಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಇನ್ನಾದರೂ ಸ್ಥಳೀಯ ಆಡಳಿತ ಸಂಸ್ಥೆಗಳು ಈ ಬಗ್ಗೆ ಕ್ರಮವಹಿಸಬೇಕು
“ಪಟ್ಟಣದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ, ಇದರಿಂದ ಕೆಲವರು ಡೆಂಗ್ಯೂನಿಂದ ಬಳಲುತ್ತಿದ್ದಾರೆ, ಸಾರ್ವಜನಿಕರು ಸ್ವಚ್ಚತೆ ಕಾಪಾಡಬೇಕು ಹಾಗೂ ಪಂಚಾಯಿತಿಯು ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಹಾಗೆಯೇ ಪಟ್ಟಣದಲ್ಲಿ ಆಗಿರುವ ಡ್ರೈನೇಜ್ ಸಮಸ್ಯೆಗಳನ್ನು ಸರಿಪಡಿಸಬೇಕು” – ವಿನೇಶ್ ಕಾಮತ್, ಸ್ಥಳೀಯರು
ಶೃಂಗೇರಿ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ ಮಾಡಿದ ಬಾಲಕಿ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಪುಟ್ಟ ಬಾಲಕಿಯೊಬ್ಬಳು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಉದ್ದದ ಕೇಶವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಠಕ್ಕರ್!; ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್
4 ನೇ ತರಗತಿಯಲ್ಲಿ ಓದುತ್ತಿರುವ ಈ ಪುಟ್ಟ ಬಾಲಕಿ ಹೆಸರು ಚಿತ್ರಿಕಾ. ಪ್ರವೀಣ್ ಎಸ್ ಸಂಕ್ಲಾಪುರ ಅವರ ಮಗಳಾಗಿರುವ ಚಿತ್ರಿಕಾ, ವಿದ್ಯಾನಗರ ಶಾಲೆಯಲ್ಲಿ 4 ನೇ ತರಗತಿಯ ಓದುತ್ತಿರುವ ಈ ಬಾಲಕಿ, ಕ್ಯಾನ್ಸರ್ ರೋಗಿಗಳಿಗಾಗಿ ತಾನು ಬೆಳೆಸಿದ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.
ಇದನ್ನೂ ಓದಿ: ಉಚಿತ ಪಡಿತರ ಸೇರಿ ಹಲವು ಭರವಸೆ ನೀಡಿದ ಬಿಜೆಪಿ
ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡು ತಲೆಗೂದಲಿಲ್ಲದೆ ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ಚಿತ್ರಿಕಾ, ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿ ಪುತ್ತೂರಿನ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಮೂಲಕ ಕೂದಲನ್ನು ದಾನವಾಗಿ ನೀಡಿದ್ದಾಳೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
ಈ ಪುಟ್ಟ ಬಾಲಕಿಯ ಮಾನವೀಯತೆ ಎಲ್ಲರಿಗೂ ಮಾದರಿಯಾಗಿದೆ.













