ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.70.6ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ವಿದ್ಯಾನಗರದ ಆದಿಚುಂಚನಗಿರಿ ಸಮುದಾಯಭವನದಲ್ಲಿ ನಡೆದ ಮತದಾನದಲ್ಲಿ ಬೆಳಗ್ಗೆಯಿಂದನೇ ಮತದಾನ ಚುರುಕಾಗಿತ್ತು. 38 ಸ್ಪರ್ಧಾಳುಗಳು ಕಣದಲ್ಲಿದ್ದು, ಮತದಾರರು 19 ನಿರ್ದೇಶಕರನ್ನು ಆಯ್ಕೆ ಮಾಡಲು ಅವಕಾಶವಿತ್ತು. ನ್ಯಾಯಾಲಯದಿಂದ ತಂದ ಹೆಚ್ಚುವರಿ ಮತದಾರರು ಸೇರಿದಂತೆ ಒಟ್ಟು 1368 ಮತದಾರರು ಮತದಾನದ ಹಕ್ಕು ಹೊಂದಿದ್ದು, 968 ಮತ ಚಲಾವಣೆಯಾಗಿದೆ.
ಇದನ್ನೂ ಓದಿ: ಮದುವೆಗೆ ಸರ್ಕಾರದಿಂದ ಸಿಗಲಿದೆ 60,000 ಸಹಾಯಧನ!; ಹೇಗೆ?, ಯಾರು ಅರ್ಹರು, ಇಲ್ಲಿದೆ ನೋಡಿ
ಮತದಾನಕ್ಕಾಗಿ 6 ಮತಗಟ್ಟೆ ನಿರ್ಮಿಸಲಾಗಿದ್ದು, ವ್ಯವಸ್ಥಿತ ಮತದಾನ ಮಾಡಲು ಅವಕಾಶ ಒದಗಿಸಿದ್ದರಿಂದ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು.
ಮ್ಯಾಮ್ಕೋಸ್ ಬಹುತೇಕ ಷೇರುದಾರರು 60 ವರ್ಷಕ್ಕೂ ಮೇಲ್ಪಟ್ಟವರಾಗಿದ್ದು, ಯುವ ಮತದಾರರ ಸಂಖ್ಯೆ ಕಡಿಮೆ ಇತ್ತು.












