ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿಯ ಅನೂಪ್ ನಾರ್ವೆ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಕೊಪ್ಪ ಮಂಡಲ ಅಧ್ಯಕ್ಷ ಬಣದ ನಡುವೆ ನಡೆದ ಫೈಟ್ ನಲ್ಲಿ ರಾಮಸ್ವಾಮಿ ಶೆಟ್ಟಿಗದ್ದೆ ಬಣದ ಅನೂಪ್ ನಾರ್ವೆ ಜಯಗಳಿಸಿದ್ದಾರೆ.
ಇನ್ನು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಿಜೆಪಿ ಪೈಟ್ ನೀಡಿದ್ದು, ರಾಮಸ್ವಾಮಿ ಶೆಟ್ಟಿಗದ್ದೆ ಬಣದ ಅನೂಪ್ ನಾರ್ವೆ ಜಯಗಳಿಸಿದ್ದಾರೆ. ಇದರಿಂದ ಕೊಪ್ಪ ಬಿಜೆಪಿ ಮಂಡಲ ಅಧ್ಯಕ್ಷರ ಬಣಕ್ಕೆ ಬಾರಿ ಮುಖಭಂಗವಾಗಿದೆ.

ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
ಹರಿಹರಪುರ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ:
ಹರಿಹರಪುರ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾಗಿದೆ. 10 ಕ್ಕೆ 10 ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಪ್ರವೀಣ್, ಮನ್ಸೂರ್, ಷರೀಫ್, ಬಾಲಕೃಷ್ಣ, ಆನಂದ, ಶ್ರೀಕಾಂತ್, ರಮ್ಯ ರವಿರಾಜ್, ಶ್ರೀಲತಾ ಸುಧಾಕರ್, ಕೃಷ್ಣ ಪ್ರಸಾದ್, ಈಶ್ವರ್ ಮತ್ವಾನೆ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
ಕೆಸವೆ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ:
ಕೆಸವೆ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದೆ. 12 ಸ್ಥಾನದಲ್ಲಿ 9 ಸ್ಥಾನ ಬಿಜೆಪಿ ಗೆದ್ದಿದೆ. ಪುಟ್ಟಪ್ಪ, ಪ್ರಭಾವತಿ ಕಾಡಪ್ಪ, ಪುಷ್ಪಪುಟ್ಟಾಸ್ವಾಮಿ, ರಶ್ಮಿ ರವೀಂದ್ರ, ಸುಭಾಷ್ ಎಸ್,ಎಮ್, ಪ್ರದೀಪ್ ಎಮ್.ಎನ್, ಶ್ರೀಕಾಂತ್ ಕೆ.ಎಸ್, ಪ್ರಸನ್ನ ಕೆ.ಪಿ, ರಾಘವೇಂದ್ರ ಕೆ.ಆರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ.
ಇನ್ನು ಪ್ರಭಾಕರ್, ಮಂಜುನಾಥ್, ಪುರುಷೋತ್ತಮ್ ಕಾಂಗ್ರೆಸ್ ಬೆಂಬಲಿತ ಅಬ್ಯರ್ಥಿಯಾಗಿ ಜಯಗಳಿಸಿದ್ದಾರೆ.
ಕುಕ್ಕುಡಿಗೆ ರವೀಂದ್ರ ತಂಡಕ್ಕೆ ಒಲಿದ ಜಯ
ಹೇರೂರು ಪಿಎಸಿಎಸ್‌ನ ಹಾಲಿ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ನೇತೃತ್ವದ ತಂಡ 7 ಸ್ಥಾನ ಪಡೆಯುವ ಮೂಲಕ ಸತತ 5ನೇ ಬಾರಿಗೆ ಜಯಗಳಿಸಿದೆ. ಹಾಲಿ ನಿರ್ದೇಶಕ ನಟರಾಜ್ ನೇತೃತ್ವದ ತಂಡ 4 ಸ್ಥಾನ ಪಡೆದಿದೆ. ಸಾಲ ಪಡೆಯದ ಕ್ಷೇತ್ರದಲ್ಲಿ ಅನ್ನಪೂರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು 7, ಬಿಜೆಪಿ ಬೆಂಬಲಿತರು 5 ಸ್ಥಾನ ಪಡೆದಿದ್ದಾರೆ. ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 462 ಮತದಾರರಲ್ಲಿ 456 ಮತದಾರರು ಮತ ಚಲಾಯಿಸಿದ್ದರು.
ಸಂಭ್ರಮಾಚರಣೆ ವೇಳೆ ಯುವಕರ ನಡುವೆ ಮಾರಾಮಾರಿ:
ಹೇರೂರು ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶದ ನಂತರ ಸಂಭ್ರಮಾಚರಣೆ ವೇಳೆ ಎರಡು ಪಕ್ಷದ ಯುವಕರ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
ಕಾಫಿ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆ:
ಆಲ್ದೂರಿನ ಕಾಫಿ ಮಹಿಳಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾನಕ್ಕೆ ಸಾದ್ವಿ ಮಧುಸೂದನ್, ಸುಧಾ ಸತೀಶ್, ಕಮಲಾ ಬಸವೇಗೌಡ, ಗೀತಾ ಮಂಜುನಾಥ್, ಜಯಾ ಶೇಖರ್, ಪ್ರತಿಭಾ ನವೀನ್, ಚಂಪಾ ಜಗದೀಶ್, ಪೂರ್ಣಿಮಾ ಸುದಿನ್ ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗದ -ಎ ಸ್ಥಾನಕ್ಕೆ ರಮ್ಯಾ ರಾಜು, ಹಿಂದುಳಿದ ವರ್ಗದ ಪ್ರವರ್ಗ ಬಿ ಸ್ಥಾನಕ್ಕೆ ಸವಿತಾ ರಮೇಶ್, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಸುಮಾ ಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.
ಹಿರೇಗದ್ದೆ ಪಿಎಸಿಎಸ್ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ:
ಬಾಳೆಹೊನ್ನೂರು ಸಮೀಪದ ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.
11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 10, ಬಿಜೆಪಿ ಬೆಂಬಲಿತ 1 ನಿರ್ದೇಶಕರು ಗೆದ್ದಿದ್ದಾರೆ. ಸಾಲ ಪಡೆದ ಸದಸ್ಯರ ಕ್ಷೇತ್ರದ ಸಾಮಾನ್ಯ ವರ್ಗದಿಂದ ಎಸ್.ಎನ್.ನಾರಾಯಣ, ಕೆ.ಸಿ.ರವೀಂದ್ರ, ಬಿ.ಡಿ.ವಿಕ್ರಮ್, ಟಿ.ಎಚ್.ವಿಜಯ್‌ಕುಮಾರ್, ಕೆ.ಎಸ್.ಸುಧಾಕರ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಎಂ.ಆರ್.ರಾಜು ಪೂಜಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಕೆ.ಎಂ.ಪ್ರಭಾಕರ, ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಸಿ.ಗೀತಾ, ಎಚ್.ಎನ್.ಶ್ವೇತಾ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗುರುವಪ್ಪ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿದೆ. ಸಾಲ ಪಡೆಯದ ಸದಸ್ಯರ ಕ್ಷೇತ್ರದಿಂದ ಎಚ್.ಕೆ.ಪ್ರಶಾಂತ್ ಆಯ್ಕೆಯಾಗಿದ್ದಾರೆ.












