ಬಾಳೆಹೊನ್ನೂರು: ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ: ರಂಭಾಪುರಿ ಶ್ರೀ

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಸಂದೇಶ ನೀಡಿದ್ದಾರೆ.


ಇದನ್ನೂ ಓದಿ: ಚಿನ್ನದ ಮೇಲೆ ಸಾಲ ಪಡೆಯಬೇಕು ಅನ್ಕೊಂಡಿದ್ದೀರಾ?; ಹಾಗಾದ್ರೆ ಈ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ; ಮಿಸ್ ಮಾಡ್ದೆ ಓದಿ


ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಶ್ರೀಗಳು ನಾಡಿನ ಜನತೆಗೆ ಸಂದೇಶ ಸಾರಿದ್ದಾರೆ. ಬಾಳೆಹೊನ್ನೂರಿನ ಮತಗಟ್ಟೆಯಲ್ಲಿ ಶ್ರೀಗಳ ಮತದಾನ ಬಳಿಕ ಉಳಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ. ಅದರಂತೆ ಜನರು ಮತದಾನ ಮಾಡಲಿದ್ದಾರೆ.


ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ; ಪೆಂಡಿಂಗ್ ಇರುವ ಹಣ ನಿಮ್ಮ ಖಾತೆಗೆ ಜಮಾ ಹೀಗೆ ಮಾಡಿ!


ಏಳು ಗಂಟೆಗೆ ಮೊದಲ ಮತದಾನ ಮಾಡಿದ ರಂಭಾಪುರಿ ಶ್ರೀಗಳು ಬಳಿಕ ನಾಡಿನ ಸಮಸ್ತ ಜನತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ.


ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಬ್ಯಾಂಕ್ ಲೋನ್ ಪಡೆಯೋದು ಹೇಗೆ ಗೊತ್ತಾ; ಇಲ್ಲಿದೆ ಟಿಪ್ಸ್


ಮೂಡಿಗೆರೆ: ಮತದಾನದಿಂದ ವಂಚಿತರಾದ ಖಾಸಗಿ ವಾಹನ ಚಾಲಕರು

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯೂ ಖಾಸಗಿ ವಾಹನಗಳ ಚಾಲಕರಿಗೆ ಮತದಾನದಿಂದ ಹೊರಗುಳಿಯುವಂತೆ ಮಾಡಲಾಗಿದ್ದು, ಚಾಲಕರು, ಸಾರ್ವಜನಿಕರು ಚುನಾವಣಾ ಆಯೋಗದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್


ಪ್ರತಿ ಚುನಾವಣೆಯಲ್ಲಿಯೂ ಖಾಸಗಿ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವ ಆಯೋಗದ ಕ್ರಮದಿಂದ ಖಾಸಗಿ ವಾಹನಗಳ ಚಾಲಕರು ಮತದಾನ ಮಾಡದೆ, ಹಕ್ಕಿನಿಂದ ವಂಚಿತರಾಗುವಂತಾಗಿದೆ. ತಾಲೂಕು ಗುಡ್ಡಗಾಡು ಪ್ರದೇಶವಾಗಿರುವುದರಿಂದ 40 ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅವುಗಳ ಚಾಲಕರು ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಿ ಅಲ್ಲಿಯೇ ಇರಬೇಕಾಗಿರುವುದರಿಂದ ಮತ ಹಕ್ಕು ಚಲಾಯಿಸಲಾಗದೇ ವಂಚಿತರಾಗುವಂತಾಗಿದೆ.


ಇದನ್ನೂ ಓದಿ: ಮಹಿಳೆಯರಿಗೆ ಹೊಸ ಭಾಗ್ಯ!; ಸಿಗಲಿದೆ ಉಚಿತ ಸೋಲಾರ್ ಸ್ಟವ್; ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ


ಪ್ರತಿ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆಯುವ ಹಿಂದಿನ ದಿನ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಿಂದ ಮತಗಟ್ಟೆಗೆ ತೆರಳುವ ಸಿಬ್ಬಂದಿ, ಇವಿಎಂ ಯಂತ್ರಗಳನ್ನು ಕೊಂಡೊಯ್ಯಲು ಜೀಪ್, ತೂಫಾನ್, ಟೆಂಪೊ ಟ್ರಾವೆಲ್ಸ್, ಖಾಸಗಿ ಬಸ್ ಸೇರಿದಂತೆ ನೂರಾರು ವಾಹನಗಳನ್ನು ಆರ್‌ಟಿಒ ಕಚೇರಿ ಮೂಲಕ ಪಟ್ಟಿ ಪಡೆದು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಚಾಲಕರಿರುವ ಮೂಲ ಸ್ಥಳ ಬಿಟ್ಟು ಹೊರ ತಾಲೂಕು ಹಾಗೂ ಹತ್ತಾರು ಕಿ.ಮೀ ದೂರದಲ್ಲಿರುವ ಮತಗಟ್ಟೆಗೆ ಕಳುಹಿಸುವುದರಿಂದ ನಾವುಗಳು ಯಾರೂ ಕೂಡ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ: ಬಿಡುಗಡೆ ಆಯ್ತು 9ನೇ ಕಂತಿನ ಗೃಹಲಕ್ಷ್ಮಿ ಹಣ; ಈ ಜಿಲ್ಲೆಗಳಿಗೆ ಮೊದಲು ಹಣ ಜಮಾ!; ಇಲ್ಲಿದೆ ನೋಡಿ ಡಿಟೈಲ್ಸ್


ಪ್ರತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ ನೌಕರರು. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು. ವೃದ್ಧರು, ಅಂಗವಿಕಲರಿಗೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸುತ್ತಿದೆ. ಒಂದೆಡೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮತ್ತೊಂದೆಡೆ ಖಾಸಗಿ ಚಾಲಕರಿಗೆ ಮತದಾನ ಮಾಡಲು ಅವಕಾಶ ನೀಡದೆ ವಂಚಿಸಲಾಗುತ್ತದೆ. ನಮ್ಮ ಗೋಳು ಕೇಳುವರು ಯಾರೂ ಇಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ವಾಹನ ಚಾಲಕರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಮಹಿಳೆಯರಿಗೆ 1 ಲಕ್ಷ, 24 ಸಾವಿರ ನೆರವು; ಎಲ್ಲಾ ರೈತರ ಸಾಲ ಮನ್ನಾ, ನಿರುದ್ಯೋಗಿಗಳಿಗೆ ಉದ್ಯೋಗ; ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳದ ಭರವಸೆ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.