ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶಾರದಾಂಬ ರೈತ ಉತ್ಪಾದಕರ ಕಂಪನಿ ರೈತರಿಗೆ ವಂಚಿಸಿ ನಾಪತ್ತೆಯಾಗಿದ್ದು, ಕಂಪನಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸುವಂತೆ ಪ್ರಶಾಂತ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ

ಹೌದು, ಶ್ರೀ ಶಾರದಾಂಬ ರೈತ ಉತ್ಪಾದಕರ ಕಂಪನಿ ಲಿ. ಶೃಂಗೇರಿಯಲ್ಲಿ 19/08/2016 ರಂದು ಕೇಂದ್ರ ಸರ್ಕಾರದ ಮಹತ್ವಕಾಂಶಿ ಯೋಜನೆಯಾದ ರೈತ ಉತ್ಪಾದಕ ಕಂಪನಿ ನಬಾರ್ಡ ಸಹಭಾಗಿತ್ವದೊಂದಿಗೆ ಪ್ರಾರಂಭಗೊಂಡಿತ್ತು. ಈ ಸಂಸ್ಥೆಯು 2022-2023 ನೇ ಸಾಲಿನಿಂದ ಶೃಂಗೇರಿ ಪಟ್ಟಣದಿಂದ ಕಛೇರಿ ಕಣ್ಮರೆಯಾಗಿದೆ. ಈ ಕಂಪನಿಯಲ್ಲಿ 700 ಜನ ರೈತ ಷೇರುದಾರರಿದ್ದು ಎಲ್ಲಾರಿಗೂ ವಂಚಿಸಿ ನಾಪತ್ತೆಯಾಗಿದೆ. ಈ ಕಂಪನಿಗೆ ನಬಾರ್ಡನಿಂದ ಸಹಾಯಧನ ದೊರಕಿದ್ದು, ರೈತರ ಷೇರು ಹಾಗೂ ನಬಾರ್ಡ ಸಹಾಯಧನ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಈ ಕಂಪನಿಯ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ವಂಚಿಸಿರುವ ಕಂಪನಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸುವಂತೆ ಮರ್ಕಲ್ ಗ್ರಾಮ ಪಂಚಾಯತಿಯ ಪ್ರಶಾಂತ ಕೆ ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ
ಈ ಹಿಂದೆಯೂ ಈ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಕುರಿತು ನ್ಯೂಸ್ ಮಲ್ನಾಡ್ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಗ ಒಂದೇ ವಾರದೊಳಗೆ ಈ ಕುರಿತ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದಿದ್ದರು, ಆದರೆ ವರ್ಷ ಕಳೆದರೂ ಇದರ ಗೋಜಿಗೆ ಹೋಗದಿರುವುದು ನೋಡಿದರೆ ಅನುಮಾನಗಳು ಹೆಚ್ಚಾಗುತ್ತಿದೆ.












