ಶೃಂಗೇರಿ: ಶ್ರೀ ಶಾರದಾ ರೈತ ಉತ್ಪಾದಕ ಕಂಪನಿ ವಿರುದ್ಧ ವಂಚನೆ ಆರೋಪ: ನಿರ್ದೇಶಕರಿಂದ ಸ್ಪಷ್ಟನೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶಾರದಾ ರೈತ ಉತ್ಪಾದಕ ಕಂಪನಿ ರೈತರಿಗೆ ವಂಚಿಸಿ ನಾಪತ್ತೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಇದೀಗ ಶ್ರೀ ಶಾರದಾ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆʼ

2015-2016 ರಿಂದ ಶ್ರೀ ಶಾರದ ರೈತ ಉತ್ಪಾದಕರ ಕಂಪನಿಯು 530 ಶೇರುದಾರರನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಇದರ ವಾರ್ಷಿಕ ಮಹಾಸಭೆಯನ್ನು ನಡೆಸುತ್ತಿದ್ದೇವೆ. ಹಾಲಿ ಇದರ ಕಛೇರಿಯು ಕಿಗ್ಗದಲ್ಲಿ ಇದ್ದು ಈ ಒಂದು ಕಂಪನಿಗೆ ಸಂಬಂಧಪಟ್ಟ ದಾಖಲೆಗಳನ್ನು ಹಾಗೂ ಕೆಲವು ಕಂಪನಿಗೆ ಸಂಬಂಧಪಟ್ಟ ವಸ್ತುಗಳನ್ನು ಇಲ್ಲಿಯೇ ಇರಿಸಿದ್ದೇವೆ. ಈ ಕಂಪನಿಗೆ ಸಂಬಂಧಪಟ್ಟಂತೆ 3 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಎಲ್ಲವೂ ಚಾಲ್ತಿಯಲ್ಲಿರುತ್ತವೆ. ಶೇರುದಾರರಿಗೆ ಯಾವುದೇ ರೀತಿಯಾದ ಮೋಸ ವಂಚನೆ ನಡೆದಿರುವುದಿಲ್ಲ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸದೇ ದೂರುದಾರರು ತಪ್ಪು ಮಾಹಿತಿಯನ್ನು ನೀಡಿ ಶೇರುದಾರರನ್ನು ತಪ್ಪು ದಾರಿಗೆ ತರುವುದು ಉದ್ದೇಶವಾಗಿದೆ.

ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ

ಈ ಕಂಪನಿಯು 2021-22 ಕೋವಿಡ್ ನಂತರ ಸ್ಥಗಿತಗೊಂಡಿದೆ. ಹಾಗೂ ಖರೀದಿ ಮತ್ತು ಮಾರಾಟವು ತಾತ್ಕಲಿಕವಾಗಿ ನಿಲ್ಲಿಸಲಾಗಿದೆ. ಶೇರುದಾರರ ಎಲ್ಲ ಹಣ ಬ್ಯಾಂಕ್ ಖಾತೆಯಲ್ಲಿರುತ್ತದೆ. ಈ ಕಂಪನಿಯು ನೇರವಾಗಿ ನಬಾರ್ಡ್ ಮತ್ತು ಇತರೇ ಯಾವುದೇ ಮೂಲಗಳಿಂದ ಹಣಕಾಸಿನ /ಸಾಲವನ್ನು ಪಡೆದಿರುವುದಿಲ್ಲ. ಕೋವಿಡ್-19 ರ ಸಂದರ್ಭದಲ್ಲಿ ಸಿಬ್ಬಂದಿಯ ವೇತನ, ಪ್ರಯಾಣ ಭತ್ಯೆ, ಆಡಳಿತ ವೆಚ್ಚ, ಬಾಡಿಗೆ ಇತ್ಯಾದಿ ವ್ಯವಹಾರಗಳಿಗೋಸ್ಕರ ಶೇರು ಹಣವನ್ನು ವ್ಯಯ ಮಾಡಿದ್ದೇವೆ. ಆದುದರಿಂದ ಈ ಬಗ್ಗೆ ಕೊಟ್ಟಿರುವ ದೂರುಗಳು ಸತ್ಯಕ್ಕೆ ದೂರವಾಗಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಶೇರುದಾರರ ವಾರ್ಷಿಕ ಮಹಾಸಭೆ ಕರೆದು ಮುಂದಿನ ತೀರ್ಮಾನವನ್ನು ಕೂಡಲೆ ಕೈಗೊಳ್ಳಲಾಗುತ್ತದೆ ಎಂದು ಶ್ರೀ ಶಾರದಾ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಮಂಜುನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.