ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಖಾಸಗಿ ಕೆಲಸಕ್ಕೆ ಸರ್ಕಾರಿ ಜೀಪ್ ಬಳಕೆ ಮಾಡಿರುವ ಆರೋಪ ಇದೀಗ ಕೊಪ್ಪ ತಹಶೀಲ್ದಾರ್ ಆದ ಲಿಖಿತಾ ಮೋಹನ್ ಮೇಲೆ ಬಂದಿದೆ.
ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಜಿಬಿಎ ಗುಡ್ನ್ಯೂಸ್; ಮಧ್ಯವರ್ತಿಗಳ ಹಾವಳಿ ಸೇರಿ ಭ್ರಷ್ಟಾಚಾರಕ್ಕೂ ಬ್ರೇಕ್

ಹೌದು, ಭಾನುವಾರ ದಂದು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕೊಪ್ಪದ ತಹಶೀಲ್ದಾರ್ ಲಿಖಿತಾ ಮೋಹನ್ ಜೀಪ್ ಅನ್ನು ಸ್ಥಳೀಯ ಮಂಜುನಾಥ್ ಕಾರ್ಬೈಲ್ ಅವರು ತಡೆದು ಭಾನುವಾರ ಸರ್ಕಾರಿ ಜೀಪ್ ಏಕೆ ತಂದಿದ್ದೀರಿ, ಸರ್ಕಾರಿ ಕೆಲಸಕ್ಕೆ ನೀಡಿರುವ ವಾಹನವನ್ನು ನಿಮ್ಮ ಖಾಸಗಿ ಕೆಲಸಕ್ಕೆ ಏಕೆ ಉಪಯೋಗಿಸಿಕೊಳ್ಳುತ್ತಿದ್ದೀರಿ, ನಿಮಗೆ ನಿಯಮಗಳು ಅನ್ವಯಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದು ಈ ಸಂಬಂಧ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ವಾಹನದಲ್ಲಿ ವಾಹನ ಚಾಲಕ ಮಾತ್ರ ಇದ್ದು ತಹಸೀಲ್ದಾರ್ ಅವರು ಇರಲಿಲ್ಲ, ಆದರೆ ಸ್ಥಳೀಯ ಹೋಂ ಸ್ಟೇ ಒಂದರಿಂದ ಕರೆದುಕೊಂಡು ಬರಲು ಹೋಗುತ್ತಿರುವುದಾಗಿ ಚಾಲಕ ತಿಳಿಸಿದ್ದಾರೆ.
ಸ್ಥಳದಿಂದ ಚಾಲಕ ತಹಸೀಲ್ದಾರ್ ಗೆ ಕರೆ ಮಾಡಿದಾಗ, ಖಾಸಗಿ ಕೆಲಸಕ್ಕೆ ಬಳಸಲು ಸರ್ಕಾರದಿಂದ ಅನುಮತಿ ಇದ್ದು ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ದೂರು ನೀಡುವಂತೆ ಲಿಖಿತಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: PM ಕಿಸಾನ್ ಯೋಜನೆಯಿಂದ 35 ಲಕ್ಷ ರೈತರ ಹೆಸರು ಡಿಲೀಟ್












