ಕಾಡಾನೆ ದಾಳಿಯಿಂದ ಬೆಳೆ ನಾಶ | ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ದಿನಗಳಿಂದ ಜಿಲ್ಲೆಯ ಕೆಲ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಜನವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಭಯ ಭೀತಿ ಉಂಟು ಮಾಡಿದೆ. ಕಾಡಾನೆಗಳ ಹಿಂಡು ತೋಟ, ಭತ್ತದ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಅಲ್ಲದೇ ಅಪಾರ ಪ್ರಮಾಣದ ಕೃಷಿ, ಬೆಳೆ ನಾಶ ಮಾಡಿವೆ.

 

ಇದನ್ನೂ ಓದಿ; ಕೃಷಿ ಉಪಕರಣ ಪಡೆಯಲು ಅರ್ಜಿ ಆಹ್ವಾನ

ಇತ್ತೀಚೆಗೆ ಖಾಂಡ್ಯ ಹೋಬಳಿಯ ಕರಾಗಣೆ, ಹುಯಿಗೆರೆ, ಬಿದರೆ ಅರಿಗೆ, ಖಾಂಡ್ಯದ ಮುಂತಾದ ಕಡೆಗಳಲ್ಲಿ ಆನೆಗಳ ದಾಳಿ ಮುಂದುವರಿದಿದ್ದು, ಅಡಿಕೆ, ಕಾಫಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳು ನಾಶ ಮಾಡಿದೆ. ಇದೇ ರೀತಿ ಕಾಡಾನೆ ಹಾವಳಿ ಮುಂದುವರಿದರೆ ಸರ್ಕಾರದ ವಿರುದ್ಧ ಹಾಗೂ ಅರಣ್ಯ ಇಲಾಖೆಯ ವಿರುದ್ಧ ದೊಡ್ಡ ಚಳುವಳಿ ಮಾಡುವುದಾಗಿ ಖಾಂಡ್ಯ ನಾಗರೀಕ ರಕ್ಷಣ ವೇದಿಕೆ ಕಾರ್ಯಕರ್ತ ಚಂದ್ರಶೇಖರ್ ರೈ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ; ಇಸ್ರೊದಿಂದ ಉದ್ಯೋಗಾವಕಾಶ

ತರೀಕೆರೆ: ವಾಣಿಜ್ಯ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

 

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ತರೀಕೆರೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ನೇತ್ರಾವತಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಇಂದು ಮುಂಜಾನೆ ಚಿಕ್ಕಮಗಳೂರು ಪಟ್ಟಣದಲ್ಲಿರುವ ನೇತ್ರಾವತಿ ಅವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿ 5 ಲಕ್ಷ ಹಣ, 900 ಗ್ರಾಮ್ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. 13 ವರ್ಷದಿಂದ ಅಧಿಕ ಆಸ್ತಿ ಹೊಂದಿರುವ ಆರೋಪದಡಿಯಲ್ಲಿ ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

 

ಚಿಕ್ಕಮಗಳೂರು: ದತ್ತಪಾದುಕೆ ಪೂಜೆ ಸಲ್ಲಿಸುವ ಅರ್ಚಕರಿಗಿಲ್ಲ ಸಂಬಳ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ 13 ತಿಂಗಳ ಹಿಂದೆ ನೇಮಕವಾದ ದತ್ತಪೀಠದ ಇಬ್ಬರು ಅರ್ಚರಿಗೆ ಇದುವರೆಗೂ ಸಂಬಳ ನೀಡದಿರುವುದು ಬೆಳಕಿಗೆ ಬಂದಿದೆ.

ದತ್ತಪೀಠದಲ್ಲಿ ಕಳೆದ 2022 ಡಿಸೆಂಬರ್ 4 ರಂದು ಅಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ಇಬ್ಬರು ಹಿಂದು ಅರ್ಚಕರಿಗೆ ಇಂದಿನ ವರೆಗೂ ಗೌರವಧನವನ್ನೇ ನೀಡಿಲ್ಲ. ಬರೋಬ್ಬರಿ 13 ತಿಂಗಳು ಕಳೆದರೂ ಯಾವುದೇ ಸಂಬಳ ನೀಡುತ್ತಿಲ್ಲ.

ಶೃಂಗೇರಿ ಮೂಲದ ಶ್ರೀಧರ್ ಭಟ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಭಟ್ ಎಂಬುವವರನ್ನು ತ್ರಿಕಾಲ ಪೂಜೆ ನಿರ್ವಹಿಸಲು ಅಂದಿನ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಆದರೆ ಇದುವರೆಗೂ ಬಿಡಿಗಾಸನ್ನು ಸಹಾ ಮುಜರಾಯಿ ಇಲಾಖೆ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಡದೇ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.