ಶೃಂಗೇರಿ: ಅಕ್ರಮವಾಗಿ ಜೆ.ಸಿ.ಬಿ ಮೂಲಕ ಮಣ್ಣು ತೆಗೆದು ಸಾಗಾಟ: ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಗೆ ಮನವಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಜೆ.ಸಿ.ಬಿ ಮೂಲಕ ಮಣ್ಣು ತೆಗೆದು ಸಾಗಾಟ ಮಾಡುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಗೆ ಯಡದಳ್ಳಿ ಗ್ರಾಮದ ಹೆಚ್.ಎಸ್. ರಾಘವೇಂದ್ರ ಕೆಲ್ಲಾರ್ ಅವರು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆʼ

ಶೃಂಗೇರಿ ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಯಡದಳ್ಳಿ ಗ್ರಾಮದ ಸರ್ವೇ ನಂ. 264ರ ಪಕ್ಕ ಸರ್ವೇ ನಂ.91ರಲ್ಲಿ ಸರ್ಕಾರಿ ಗುಡ್ಡ 104 ಎಕರೆಯಲ್ಲಿ 2 ದಿನದಿಂದ ಜೆಸಿಬಿ ಮತ್ತು ಟಿಪ್ಪರ್‌ಯಿಂದ ರಾತ್ರಿ ಹಗಲು ಮಣ್ಣು ತೆಗೆಯುತ್ತಿದ್ದಾರೆ. ಈ ಗುಡ್ಡದ ಸಮೀಪ ಮುಸ್ಲಿಂ ಸ್ಮಶಾನ ಹಾಗೂ ಅಪಾರ ಪ್ರಮಾಣದ ಮರ ಗಿಡಗಳು ಇದ್ದು, ರಾತ್ರಿ ಹಗಲು ಎನ್ನದೆ ಜೆಸಿಬಿ ಮೂಲಕ ಅಪಾರ ಪ್ರಮಾಣದ ಮಣ್ಣು ತೆಗೆದು ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ

ಸರ್ವೇ ನಂ. 264ಕ್ಕೆ ಹಿಂದೆ ಸಾರ್ವಜನಿಕ ಅರ್ಜಿಗಳನ್ನು ನೀಡಿದ್ದು ಅರಣ್ಯ ಇಲಾಖೆಯವರಿಗೆ ಇನ್ನು ಮಣ್ಣು ತೆಗೆಯುವುದಿಲ್ಲ ಎಂದು ಮುಚ್ಚಳಿಕೆಯವರು ಬರೆದುಕೊಟ್ಟಿದ್ದಾರೆ. ಆದರೆ, ಅಕ್ರಮ ಮಣ್ಣನ್ನು ತೆಗೆಯುತ್ತಿರುವುದರಿಂದ ಸರ್ಕಾರಿ ಬಾವಿಯ ಅಂತರ್ಜಲ ಬತ್ತಿ ಹೋಗುತ್ತಿದ್ದು, ಪಕ್ಕದಲ್ಲಿ ಅಂಗನವಾಡಿಗೆ ಧೂಳು ಮತ್ತು ಶಬ್ದದಿಂದ ಯಾವ ಮಕ್ಕಳು ಬರುತ್ತಿಲ್ಲ. ಅಲ್ಲದೆ ಮಳೆಗಾಲದಲ್ಲಿ ಅಪಾರ ಪ್ರಮಾಣದ ಭೂಕುಸಿತ ಆಗುತ್ತಿದ್ದು, ಹಾಗೂ ಮುಸ್ಲಿಂ ಜನಾಂಗದ ಸ್ಮಶಾನ ಜರಿಯುತ್ತಿದೆ. ಈ ಕುರಿತು 4-5 ವರ್ಷಗಳಿಂದ ಡಿ.ಸಿ. ಎಸ್.ಪಿ. ಅರಣ್ಯ ಇಲಾಖೆ, ತಹಸೀಲ್ದಾ‌ರ್, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪಿ.ಡಿ.ಓ ಗಳಿಗೆ ಅರ್ಜಿಯನ್ನ ನೀಡಿದ್ದರು ಯಾವುದೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಕೂಡಲೇ ಮಣ್ಣು ತೆಗೆಯುವುದನ್ನು ನಿಲ್ಲಿಸುವಂತೆ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆದಿಲ್ಲ: ಮಾಲೀಕ ವಿಜೇಂದ್ರ ಸ್ಪಷ್ಟನೆ

ಆದರೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಿಸಲಾಗಿದೆ ಎಂಬ ಆರೋಪಕ್ಕೆ ವಿಜೇಂದ್ರ ಅವರು ಸ್ಪಷ್ಟನೆ ನೀಡಿದ್ದು, ನಮ್ಮ ಖಾಸಗಿ ಜಾಗದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದು ರಾಯಲ್ಟಿ ಕಟ್ಟಿದ ನಂತರವೇ ಮಣ್ಣು ತೆಗೆದಿದ್ದು ಅದಕ್ಕೆ ಪೂರಕವಾದ ದಾಖಲೆಗಳು ಸಹ ಇದೆ, ಈ ಆರೋಪವು ಸತ್ಯಕ್ಕೆ ದೂರವಾದದ್ದು ಎಂದು ವಿಜೇಂದ್ರ ಅವರು ಆರೋಪವನ್ನು ತಳ್ಳಿಹಾಕಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.