ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಶೃಂಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಇದನ್ನೂ ಓದಿ: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…!; ಅಂಚೆ ಅಚೇರಿಯಲ್ಲಿದೆ ಭರ್ಜರಿ ಸ್ಕೀಮ್

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ನಡುವೆಯೂ ಮರಳು ದಂಧೆ ಕೆಲವೆಡೆ ನಡೆಯುತ್ತಿದೆ. ತಾಲ್ಲೂಕಿನ ನಲ್ಲೂರು ಸಮೀಪದ ಮರಗೆಬೈಲು ಎಂಬಲ್ಲಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಶೃಂಗೇರಿ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ತಪಾಸಣೆ ನಡೆಸಿದ್ದು, ಈ ವೇಳೆ ಅಕ್ರಮವಾಗಿ ಮರಳು ಸಾಗಣೆ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆ ವಾಹನದ ಮಾಲೀಕ ಪ್ರತೀಕ್ ಶೆಟ್ಟಿ ಎನ್ನುವವನ ವಿರುದ್ಧ FIR ದಾಖಲಿಸಲಾಗಿದೆ. ಶೃಂಗೇರಿ ಸುತ್ತಮುತ್ತ ಅಲ್ಲಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಮಳೆಗಾಲದಲ್ಲೂ ಸಹ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಪ್ರತೀಕ್ ಶೆಟ್ಟಿ ಈ ಹಿಂದೆಯಿಂದಲೂ ಇದೇ ದಂಧೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದ್ದು, ಈ ಹಿಂದೆ ಹಾಡಹಗಲೇ ತುಂಗಾ ನದಿಗೆ ಜೆಸಿಬಿ ಇಳಿಸಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾಗ ಶೃಂಗೇರಿ ತಹಶೀಲ್ದಾರ್ ಅನೂಪ್ ದಾಳಿ ಮಾಡಿ ಈತನಿಗೆ ಸುಮಾರು 1,34,680 ರೂ. ದಂಡ ವಿಧಿಸಿದ್ದರು.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಾಬ್; ವಿದ್ಯಾರ್ಹತೆ ಡಿಟೈಲ್ಸ್ ಇಲ್ಲಿದೆ ನೋಡಿ












