ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೆಲಸಕ್ಕೆ ಹೊರಟಿದ್ದ ಕೂಲಿ ಕಾರ್ಮಿಕನ ಮೇಲೆ ಏಕಾಏಕಿ ಹುಚ್ಚು ನಾಯಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ

ಕೆಲಸಕ್ಕೆಂದು ಹೊರಟಿದ್ದ ಕೂಲಿ ಕಾರ್ಮಿಕ ಮಹೇಶ್ ಎಂಬುವವರ ಮೇಲೆ ಇಂದು ಬೆಳಿಗ್ಗೆ ಏಕಾಏಕಿ ಪಟ್ಟಣದ ಬಸ್ ನಿಲ್ದಾಣದ ಬಳಿ ಹುಚ್ಚು ನಾಯಿ ದಾಳಿ ಮಾಡಿದೆ. ಅಲ್ಲದೆ ವಿವೇಕಾನಂದ ರಸ್ತೆಯಲ್ಲಿ ಮೂರು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ಪರಿಣಾಮ ಇಬ್ಬರಿಗೂ ಗಾಯಗಳಾಗಿದೆ.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಪಟ್ಟಣದಲ್ಲಿ ಹಲವು ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ ಎನ್ನಲಾಗಿದ್ದು, ಸಾರ್ವಜನಿಕರು ಭಯದಲ್ಲೇ ತಿರುಗಾಡುವಂತಾಗಿದೆ. ಈ ಕುರಿತು ಹುಚ್ಚು ನಾಯಿದಾಳಿಗೊಳಗಾದ ಮಹೇಶ್ ಅವರು ಕೊಪ್ಪ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದು, ಅಧಿಕಾರಿಗಳು ಕೂಡಲೇ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಮಹಿಳೆಯರಿಗೆ ಬಂಪರ್ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ
“ಕಳೆದ ಎರಡು ಮೂರು ದಿನಗಳಿಂದ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಹಲವರಿಗೆ ಗಾಯವಾಗಿದೆ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದಿನ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಇದರ ಬಗ್ಗೆ ಪಟ್ಟಣ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಆರೋಗ್ಯದ ಸ್ಥಿತಿ ಸುಧಾರಿಸುವವರೆಗೆ ಪರಿಹಾರ ನೀಡಬೇಕು”– ಕೆ.ಎಸ್ ಮಹೇಶ್, ಹುಚ್ಚು ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿ.












