
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲವು ದಿನಗಳ ಹಿಂದೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಕಳೆದ ನಾಲ್ಕು ದಿನಗಳ ಹಿಂದೆ (14-03-2025) ಶುಕ್ರವಾರ ದಂದು) ಶೃಂಗೇರಿ ತಾಲೂಕಿನ ಅಡ್ಡಗದ್ದೆ ಸಮೀಪದಲ್ಲಿ ಲಾರಿಯನ್ನು ಶೃಂಗೇರಿಯ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಸೀಜ್ ಮಾಡಿ FIR ದಾಖಲಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ 2 ಪಿಕಪ್ ಹಾಗೂ 2 ಲಾರಿಯನ್ನ ವಶಕ್ಕೆ ಪಡೆದಿದ್ದಾರೆ. ಈಗ ವಶಪಡಿಸಿಕೊಂಡ ಲಾರಿ ಸುಂದರೇಶ್ ಎಂಬುವವರಿಗೆ ಸೇರಿದ್ದಾಗಿದೆ. ಮರಳು ಸಾಗಾಟ ಮಾಡುವಾಗ ಬೇಗಾರ್ ಗ್ರಾಮ ಪಂಚಾಯಿತಿಯಿಂದ ಪಡೆದ ಲಾಯಲ್ಟಿ ಪಡೆದ ಚಲನ್ ಇತ್ತಾದರೂ ಪಂಚಾಯಿತಿ ವ್ಯಾಪ್ತಿಯಿಂದ ಹೊರಗೆ ನಡೆದ ಕೃತ್ಯವಾದ್ದರಿಂದ ಅಕ್ರಮ ಎಂದೇ ಪರಿಗಣಿಸಲಾಗಿದೆ.
ಇದನ್ನೂ ಓದಿ: ಮನೆಗೆ ಜೈವಿಕ ಅನಿಲ ಘಟಕ ಸೇರಿದಂತೆ ಸಬ್ಸಿಡಿ; ಯಾರಿಗೆ ಸಬ್ಸಿಡಿ? ಎಷ್ಟು ಸಹಾಯಧನ?

ಇನ್ನೂ ನಿಂತಿಲ್ಲ ಅಕ್ರಮ, ಟ್ರೆಂಚ್ ಪಕ್ಕದಲ್ಲಿ ಹೊಸ ದಾರಿ:
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದಂತೆಯೇ ತಾಲ್ಲೂಕಿನಾದ್ಯಂತ ಮರಳು ಅಕ್ರಮ ಸಾಗಾಣಿಕೆ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಈ ಕುರಿತು ವರದಿ ಮಾಡಿದ ಬಳಿಕ ಶೃಂಗೇರಿ ತಹಶೀಲ್ದಾರ್ ಅನೂಪ್ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆ ನದಿ ಭಾಗದಲ್ಲಿ ಅಕ್ರಮವಾಗಿ ಮರಳು ಸಾಗಟ ಮಾಡದಂತೆ ಜೆಸಿಬಿ ಮೂಲಕ ಟ್ರೆಂಚ್ ಹೊಡಿಸಿದ್ದರು. ಇದರಿಂದ ನದಿ ತೀರಕ್ಕೆ ವಾಹನಗಳು ಇಳಿಯದಂತೆ ಮರಳು ಅಕ್ರಮ ದಂಧೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. ಆದರೆ, ಇದ್ಯಾವುದಕ್ಕೂ ಬಗ್ಗದ ಮರಳು ದಂಧೆಕೋರರು ಟ್ರೆಂಚ್ ತೆಗೆಸಿದ ಪಕ್ಕದಲ್ಲಿಯೇ ಹೊಸ ದಾರಿ ಮಾಡಿಕೊಂಡು ಮತ್ತೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?
ಒಂದು ಕಣ್ಣಿಗೆ ಬೆಣ್ಣೆ.. ಇನ್ನೊಂದಕ್ಕೆ ಸುಣ್ಣ: ಮಾಜಿ ಶಾಸಕ ಜೀವರಾಜ್ ಕಿಡಿ
ಈ ಅಕ್ರಮ ಮರಳು ದಂಧೆಯಲ್ಲಿ ಬಿಜೆಪಿ ಅವರ ವಾಹನ ಸೀಜ್ ಮಾಡಿ ಎಫ್.ಐ.ಆರ್ ದಾಖಲಿಸಿಕೊಳ್ಳುತ್ತಾರೆ. ಆದರೆ, ಕಾಂಗ್ರೇಸ್ ಅವರ ವಾಹನ ಸೀಜ್ ಮಾಡಿ ಸಣ್ಣ ಪ್ರಮಾಣದ ದಂಡ ವಿಧಿಸಿ ವಾಹನವನ್ನು ಬಿಡುತ್ತಾರೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಎಂದು ಪೊಲೀಸರೇ ತಾರತಮ್ಯ ಮಾಡುತ್ತಿದ್ದಾರೆ ಎಂದು ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಜೀವರಾಜ್ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
ಕೊಪ್ಪ ಭಾಗದಲ್ಲೂ ಮರಳು ದಂಧೆ, ಟ್ರೆಂಚ್ ತೆಗೆಸಿದ ಪೊಲೀಸ್ ಇಲಾಖೆ
ಕೊಪ್ಪ ತಾಲೂಕಿನ ಹರಿಹರಪುರ ತುಂಗಾ ನದಿ ಸಮೀಪ ರಾತ್ರಿ ಹೊತ್ತು ವಾಹನದಲ್ಲಿ ಮರಳು ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ಕುರಿತು ದೂರು ಬಂದ ಹಿನ್ನೆಲೆ ಕೊಪ್ಪ DYSP ಬಾಲಾಜಿ ಸಿಂಗ್ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ ಪಡೆದಿದ್ದಾರೆ. ಬಳಿಕ ಮರಳು ದಂಧೆ ನಡೆಯದಂತೆ ನದಿ ಬಳಿ ಹೋಗೋ ದಾರಿಗೆಲ್ಲಾ ಜೆಸಿಬಿ ಮೂಲಕ ಟ್ರಂಚ್ ನಿರ್ಮಿಸಿದ್ದಾರೆ.
ರಾಯಲ್ಟಿ ಸಿಸ್ಟಮ್ ಗೆ ಚಾಲನೆ;
ಇನ್ನು ತಾಲ್ಲೂಕಿನಾದ್ಯಂತ ಮರಳಿಗೆ ಗ್ರಾಮ ಪಂಚಾಯಿತಿವಾರು ರಾಯಲ್ಟಿ ನೀಡಿ ಮರಳು ಸಾಗಣೆಗೆ ಪರವಾನಗಿ ನೀಡುವ ವ್ಯವಸ್ಥೆ ತರಲಾಗುತ್ತಿದ್ಧು, ಸದ್ಯ ಬೇಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಮತಿ ನೀಡಲಾಗುತ್ತಿದೆ. ಉಳಿದಂತೆ ಉಳಿದ ಪಂಚಾಯಿತಿಗಳಿಗೂ ವಿಸ್ತರಿಸುವ ಬಗ್ಗೆ ಕಾರ್ಯ ನಡೆಯುತ್ತಿದೆ













