ಬಣಕಲ್: (ನ್ಯೂಸ್ ಮಲ್ನಾಡ್ ವರದಿ) 2025-26ನೇ ಸಾಲಿನ ಮೂಡಿಗೆರೆ-ಕಳಸ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಬಣಕಲ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು.
ಇದನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಧ್ವಜಾರೋಹಣ ಕಾರ್ಯಕ್ರಮವನ್ನು ಕಾಲೇಜಿನ ಸದಸ್ಯ ಶಿವರಾಮ ಶೆಟ್ಟಿ ನೆರವೇರಿಸಿದರು. ಕ್ರೀಡಾಜ್ಯೋತಿಯನ್ನು ಬಣಕಲ್ ವಿದ್ಯಾ ಸಂಸ್ಥೆಯ ಕೋಶಾಧಿಕಾರಿ ಬಿಕೆ ಪೃಥ್ವಿಯವರು ಸ್ವೀಕರಿಸಿ ಪ್ರತಿಷ್ಠಾಪಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಮಾಜಿ ಸಚಿವ ಮೋಟಮ್ಮರು ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಸ್ತಿನ ಮಹತ್ವ, ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಅಗತ್ಯವನ್ನು ಮನವರಿಕೆ ಮಾಡಿಸಿದರು.
ತಾಲೂಕು ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಶ್ರೀ ಕೆ.ಬಿ. ಶ್ರೀನಿವಾಸ್ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಾರಂತೆ ಮತ್ತು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ; ಅರ್ಜಿ ಸಲ್ಲಿಸುವುದು ಹೇಗೆ?
ಕ್ರೀಡಾಕೂಟದ ದಾನಿಗಳಾದ ಬಿ.ಎನ್. ಸಂದೇಶ್, ರಮೇಶ, ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀ ದೇವರಾಜು, ಚಿಕ್ಕಮಗಳೂರು ಜಿಲ್ಲಾ ಉಪ ನಿರ್ದೇಶಕಿ ಕೆ. ಮಂಜುಳಾ, ಕಾಲೇಜಿನ ಪ್ರಾಚಾರ್ಯ ಸತೀಶ್ ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಜರಿನ ಬಾನು, ಸದಸ್ಯರು ಇರ್ಫಾನ್, ಆತಿಕ ಬಾನು, ಹಾಗೂ ಸ್ಥಳೀಯ ಕಾಫಿ ಬೆಳೆಗಾರರು ಕಾಲೇಜು ಅಭಿವೃದ್ಧಿ ಖಜಾಂಚಿಗಳಾದ ಬಿ.ಡಿ. ವಿಜಯೇಂದ್ರ ಗೌಡ, ಸದಸ್ಯರು ಶಿವರಾಮ ಶೆಟ್ಟಿ, ಗೋಪಾಲಚಾರ್, ವಿವೇಕ್ ಬಿ.ಎಸ್, ಬಿ.ಎ. ಉಮರ್, ಚಂದ್ರಯ್ಯ, ಶಾರದಮ್ಮ ಮತ್ತು ತಾಲ್ಲೂಕಿನ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಸಹ ಹಾಜರಿದ್ದರು.
ಬಣಕಲ್ ಫ್ರೆಂಡ್ಸ್ ಕ್ಲಬ್ ಮತ್ತು ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿ ಆಯೋಜಿಸಲಾಯಿತು. ಕ್ರೀಡಾಕೂಟವು ಹಸಿರುಮಯ, ಉಲ್ಲಾಸಭರಿತ ವಾತಾವರಣದಲ್ಲಿ ನಡೆಯಿತು. ಪ್ರೇಕ್ಷಕರು ಮತ್ತು ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿದರು. (ವರದಿ- ತನು ಕೊಟ್ಟಿಗೆಹಾರ)












