ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬಾಲಕಿಗೆ ಪುಸಲಾಯಿಸಿ ಲಾಡ್ಜ್ ವೊಂದಕ್ಕೆ ಕರೆದೊಯ್ಯು ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದ ಇಬ್ಬರು ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕಡೂರು ತಾಲ್ಲೂಕಿನ ಚಿಕ್ಕಂಗಳದ ಕಿರಣ್ ನಾಯಕ, ಅಭಿಷೇಕ್ ನಾಯ್ಕ ಶಿಕ್ಷೆಗೆ ಒಳಗಾದವರು.
ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ

ಮೊದಲ ಆರೋಪಿ ಕಿರಣ್ ನಾಯ್ಕ್ ಗೆ ₹41ಸಾವಿರ ದಂಡ, ಎರಡನೇ ಆರೋಪಿ ಅಭಿಷೇಕ್ ನಾಯ್ಕಗೆ ₹11 ಸಾವಿರ ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ ₹1 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ.
2023ರ ನವೆಂಬರ್‌ನಲ್ಲಿ ಪ್ರಕರಣ ನಡೆದಿದ್ದು, ಒಂದನೇ ಆರೋಪಿ ಕಿರಣ್ ನಾಯಕ, ಎರಡನೇ ಆರೋಪಿ ಅಭಿಷೇಕ್ ನಾಯ್ಕನ ಸಹಾಯದಿಂದ ಬಾಲಕಿಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಈ ಕುರಿತು ನೀಡಿದ ದೂರಿನ ಅನ್ವಯ ಪೋಕ್ರೋ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಗೃಹಲಕ್ಷ್ಮಿ ಬಾಕಿ ಹಣ ಈ ದಿನ ಜಮೆ!; ಇಲ್ಲಿದೆ ನೋಡಿ ಡಿಟೈಲ್ಸ್
ವೃತ್ತ ನಿರೀಕ್ಷಕ ಕೆ.ಆರ್.ಶಿವಕುಮಾರ್ ಪ್ರಕರಣದ ತನಿಖೆಯನ್ನು ನಡೆಸಿ, ಪ್ರಭಾರ ವೃತ್ತ ನಿರೀಕ್ಷಕ ಶ್ರೀಕಾಂತ್ ಎನ್.ಎಸ್.ಆರೋಪಿತರ ವಿರುದ್ಧ ಚಿಕ್ಕಮಗಳೂರಿನ ಪೋಕೋ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಪಟ್ಟಿಯನ್ನು ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಭರತ್ ಕುಮಾರ್ ವಾದ ಮಂಡಿಸಿದ್ದರು.












