ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅಂತಿಮ ವರ್ಷದ ಬಿ.ಇ. ಇಂಜಿನಿಯರಿಂಗ್ ಪದವಿಯ ಇಂಡಸ್ಟ್ರಿಯಲ್ ಮ್ಯಾನೆಜ್ಮೆಂಟ್ ವಿಭಾಗದಲ್ಲಿ ಕು.ಹರ್ಷಿತಾ ಹೆಚ್.ಪಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ: ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್ ಕಡ್ಡಾಯ!

ಕೊಪ್ಪ ಪಟ್ಟಣದ ರಾಘವೇಂದ್ರ ಭಟ್ ಎಂಡ್ ಸನ್ಸ್ ಅಂಗಡಿ ಮಾಲೀಕರಾದ ಸಿ.ಆರ್.ಹಿರಿಯಣ್ಣ ಇವರ ಮೊಮ್ಮಗಳಾದ ಕು.ಹರ್ಷಿತಾ ಹೆಚ್.ಪಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಅಂತಿಮ ವರ್ಷದ ಬಿ.ಇ. ಇಂಜಿನಿಯರಿಂಗ್ ಪದವಿಯ ಇಂಡಸ್ಟ್ರಿಯಲ್ ಮ್ಯಾನೆಜ್ಮೆಂಟ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದಿದ್ದಾರೆ.
ಇದನ್ನೂ ಓದಿ: 7.5 ಲಕ್ಷ ಬಿ-ಖಾತಾಗಳಿಗೆ ಎ ಖಾತಾ ವಿತರಣೆ
ಇಬರು ಬೆಂಗಳೂರಿನ ಬಿಎಮ್ಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಇವರ ಸಾಧನೆಗೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಗುರಿಯಾಗಿ ತಾಂತ್ರಿಕ ಕ್ಷೇತ್ರದಲ್ಲಿ ಮಲೆನಾಡಿನಲ್ಲಿ ಹೊಸ ಅವಿಷ್ಕಾರ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿ ಪದಕ ವಿಜೇತೆ ಕು.ಹರ್ಷಿತಾ ತಿಳಿಸಿದ್ದಾರೆ.
ಇದನ್ನೂ ಓದಿ: ಗುತ್ತಿಗೆ ಶಿಕ್ಷಕರ ನೇಮಕಾತಿ ಕುರಿತು ಸುಪ್ರೀಂಕೋರ್ಟ್ ಮಹತ್ವದ ಆದೇಶ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್












