ರಜತ ಪದಕ ಮುಡಿಗೇರಿಸಿಕೊಂಡ ಸ್ನೇಹಾ ಎಸ್. ಎಸ್ ತಂಡ

ದಕ್ಷಿಣ ಕೊರಿಯಾದಲ್ಲಿ ನಡೆದ ಏಷಿಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ 4X100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡದ ಸ್ಪರ್ಧಿಯಾಗಿ ಸ್ಪರ್ಧಿಸಿದ ಶೃಂಗೇರಿ ತಾಲೂಕಿನ ಸ್ನೇಹಾ ಹಾಗೂ ಅವರ ತಂಡ 2ನೇ ಸ್ಥಾನ ಪಡೆದಿದೆ.


ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ; ಆದೇಶದ ಪ್ರತಿ ಇಲ್ಲಿದೆ ನೋಡಿ


ಮಹಿಳೆಯರ 4×100 ರಿಲೇ ಸ್ಪರ್ಧೆ:
ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌‌ ಶಿಪ್ 2025 ರ ಮಹಿಳೆಯರ 4×100 ರಿಲೇ ಸ್ಪರ್ಧೆಯಲ್ಲಿ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಶ್ರಬನಿ ನಂದಾ, ಅಭಿನಯ ರಾಜರಾಜನ್, ನಿತ್ಯ ಗಂದೆ ಈ ತಂಡದೊಳಗಿದ್ದ ಶೃಂಗೇರಿ ತಾಲೂಕಿನ ಸ್ನೇಹಾ ರಜತ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

43.86 ಸೆಕೆಂಡ್‌ ನಲ್ಲಿ ತಲುಪವ ಮೂಲಕ 2ನೇ ಸ್ಥಾನ:
43.28 ಸೆಕೆಂಡ್‌ ನಲ್ಲಿ ಚೀನಾ ಮೊದಲು ಸ್ಥಾನ 43.86 ಸೆಕೆಂಡ್‌ ನಲ್ಲಿ ಭಾರತ ಎರಡನೇ ಸ್ಥಾನ ಹಾಗೂ 44.26 ಸೆಕೆಂಡ್‌ ನಲ್ಲಿ ತೈಲ್ಯಾಂಡ್‌ ಮೂರನೇ ಸ್ಥಾನ ಪಡೆದುಕೊಂಡಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಆಯ್ಕೆ:
ಮುಂದಿನ ವರ್ಷ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಸ್ನೇಹ ಹಾಗೂ ಅವರ ತಂಡವು ಭಾಗವಹಿಸುವ ಅರ್ಹತೆಯನ್ನು ಖಚಿತಪಡಿಸಿದೆ.


ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ;ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒನ್ ಟೈಮ್ ನೋಂದಣಿ ಕಡ್ಡಾಯ


ರಜತ ಪದಕ ಮುಡಿಗೇರಿಸಿಕೊಂಡ ಮಲೆನಾಡ ಹುಡುಗಿ:
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಪಂಚಾಯಿತಿಯ ಸತ್ಯನಾರಾಯಣ ಎಸ್.ಎಸ್ ಹಾಗೂ ಶಾಲಿನಿ ಕೆ.ಎ ಅವರ ಪುತ್ರಿಯಾಗಿರುವ ಸ್ನೇಹ ಎಸ್. ಎಸ್, ಶೃಂಗೇರಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ತೊರೆಹಡ್ಲುವಿನ ಹಳೆ ವಿದ್ಯಾರ್ಥಿನಿ.

ಸ್ನೇಹಾರವರು ಹೆಚ್.ಆರ್.ಡಿ.ಎಸ್ ಸ್ಪೋಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ಈ ಒಂದು ಅಮೋಘ ಸಾಧನೆಯು ಈ ಒಂದು ಅಕಾಡೆಮಿಗೆ ಮೊದಲ ಅಂತರಾಷ್ಟ್ರೀಯ ಪದಕವಾಗಿದೆ. ಈ ಬೆಳ್ಳಿ ಪದಕವು ಕೇವಲ ವೈಯಕ್ತಿಕ ಮೈಲಿಗಲ್ಲಲ್ಲ. ಇದು ಪ್ರತಿಭೆ, ಶಿಸ್ತು, ಮತ್ತು ಅವಕಾಶದಲ್ಲಿ ನಂಬಿಕೆ ಇಡುವ ವ್ಯವಸ್ಥೆಯ ಯಶಸ್ಸು ಎಂದು ಸಂಸ್ಥಾಪಕ ಕಾರ್ಯದರ್ಶಿ ಹೇಳಿದ್ದಾರೆ.


ಇದನ್ನೂ ಓದಿ: ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ; ಹೈಕೋರ್ಟ್ ಆದೇಶ


ಇನ್ನು ಸ್ನೇಹಾ ಅವರ ಸಾಧನೆ ಹೀಗಿದೆ ನೋಡಿ:
* ರಾಷ್ಟ್ರೀಯ ಕ್ರೀಡಾಕೂಟ 2023 ಗೋವಾ, 100 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 4×100 ಮೀಟರ್ ರಿಲೇಯಲ್ಲಿ ಕಂಚು.
* ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಶಿಪ್ 2023-ಬೆಂಗಳೂರು, 100 ಮೀಟ‌ರ್ ಓಟದಲ್ಲಿ ಬೆಳ್ಳಿ ಪದಕ.
* ದಸರಾ ಸಿಎಂ ಕಪ್ 2023-ಮೈಸೂರು, 100 ಮೀಟರ್ ಓಟದಲ್ಲಿ ಚಿನ್ನದ ಪದಕ.
* ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ತಮಿಳುನಾಡು ಅಥ್ಲೆಟಿಕ್ಸ್ 100 ಮೀಟ‌ರ್ ಮತ್ತು 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ.
* ದಕ್ಷಿಣ ವಲಯದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಚೆನ್ನೈ 100 ಮೀಟರ್ ಮತ್ತು 4X100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.