ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ; ಆದೇಶದ ಪ್ರತಿ ಇಲ್ಲಿದೆ ನೋಡಿ

ದಾವಣದಿಂದ ನರಸಿಂಹರಾಜಪುರ ಮಾರ್ಗವಾಗಿ ಅಕ್ರಮವಾಗಿ ಗೋ ಸಾಗಾಟ ಆಗುತ್ತಿದೆ ಎಂಬ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇಲಾಖೆ ದಾಳಿ ನಡೆಸಿ 6 ಗೋವುಗಳನ್ನು ರಕ್ಷಿಸಲಾಗಿದೆ.
ಗೋ ಸಾಗಾಟ ದಂಧೆ ನಡೆಸುತ್ತಿರುವ ಆರೋಪ:
ಈ ಅಕ್ರಮ ಗೋ ಸಾಗಾಟ ಕ್ಕೆ ಗೋವುಗಳನ್ನು ದವಣ ಮಂಜು ನೀಡಿರುವುದಾಗಿ ತಿಳಿದುಬಂದಿದೆ. ಜೊತೆಗೆ ದವಣ ಮಂಜು ಅವರು ಅಕ್ರಮ ಗೋ ಸಾಗಾಟ ಮಾಡುವ ದಂಧೆ ನಡೆಸುತ್ತಿರುವ ಆರೋಪವೂ ಕೂಡ ಸ್ಥಳೀಯರಿಂದ ಕೇಳಿ ಬಂದಿದೆ.
ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ;ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒನ್ ಟೈಮ್ ನೋಂದಣಿ ಕಡ್ಡಾಯ
ಅಲ್ಲದೆ ಪೊಲೀಸರು ವಶಪಡಿಸಿಕೊಂಡ ಗಾಡಿಯು ಈ ಹಿಂದೆಯೂ ಸಹ ಗೋ ಸಾಗಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ:
ಇನ್ನು ಈ ಗಾಡಿಯ ಚಾಲಕರು, ಮಾಲೀಕರು ಸೇರಿದಂತೆ ದವಣ ಮಂಜು ಹಾಗೂ ಇದರಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ.
ಇದನ್ನೂ ಓದಿ: ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ; ಹೈಕೋರ್ಟ್ ಆದೇಶ
“ಬಕ್ರಿದ್ ಹಬ್ಬ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಪಶು ವೈದ್ಯಾಧಿಕಾರಿಗಳು ಗೋ ಸಾಗಟಕ್ಕೆ ಪರ್ಮಿಷನ್ ಕೂಡಬಾರದು. ಈಗಾಗಲೇ ರೈತರ ಹೆಸರು ಹೇಳಿ ಕಸಾಯಿಖಾನೆಗೆ ಗೋ ಸಾಗಟ ಆಗುತ್ತಿದೆ. ಅದರಿಂದ ಬಕ್ರೀದ್ ಹಬ್ಬದ ಮುಗಿಯೋತನಕ ಯಾವುದೇ ಕಾರಣಕ್ಕೂ ಪರ್ಮಿಷನ್ ಕೊಡಬಾರದು”. – ಅಜಿತ್ ಕಳಸ, ಬಜರಂಗದಳ ಮುಖಂಡ












