ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಹಲಸಿನ ಹಣ್ಣು ಕುಯ್ಯಲು ತೆರಳುತ್ತಿರುವ ವೇಳೆ ವಿದ್ಯುತ್ ಶಾಕ್ ಹೊಡೆದು ಕೃಷಿಕರೊಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬರ ಪರಿಹಾರ; ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವಾ?; ಹೀಗೆ ಚೆಕ್ ಮಾಡಿ

ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟದ ವಿಜಯಗೌಡ (56) ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟ ಕೃಷಿಕ. ಹಲಸಿನ ಹಣ್ಣು ಕುಯ್ಯಲು ತೆರಳುತ್ತಿದ್ದಾಗ ಅಲ್ಯುಮಿನಿಯಂ ಎಣಿ ವಿದ್ಯುತ್ ವೈರ್ ಗೆ ತಗಲಿದ ಪರಿಣಾಮ ಸ್ಥಳದಲ್ಲಿಯೇ ವಿಜಯ್ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾಕ್ ಹೊಡೆದ ಪರಿಣಾಮ ದೇಹದ ಬಹುತೇಕ ಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿತ್ತು. ಹೊಗೆಯನ್ನು ಗಮನಿಸಿದ ಸ್ಥಳೀಯರೊಬ್ಬರು ಮೆಸ್ಕಾಂ ಸಿಬ್ಬಂಧಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; Hsrp Number Plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಮಹತ್ವದ ಮಾಹಿತಿ; ಏನದು? ಇಲ್ಲಿದೆ ನೋಡಿ
ಘಟನೆಯ ಕುರಿತು ಮೃತರ ಪತ್ನಿ ಪ್ರಮೀಳ ಜಯಪುರ ಠಾಣೆಗೆ ದೂರು ನೀಡಿದ್ದು, ಪಿಎಸ್ಐ ಅಂಬರೀಶ್ ತನಿಖೆ ಪ್ರಾರಂಭಿಸಿದ್ದಾರೆ.
ಕೊಪ್ಪ: ಓಡಿಶಾದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸ್ನೇಹಾ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಓಡಿಶಾದಲ್ಲಿ ನಡೆದ 27 ನೇ ರಾಷ್ಟ್ರೀಯ ಫೆಡರೇಶನ್ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸ್ನೇಹಾ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಲಭಿಸಿದೆ.
ಇದನ್ನೂ ಓದಿ: ರೈತರೇ ಗಮನಿಸಿ; ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಬೆಳೆಪರಿಹಾರ ಹಣ; ಹಣ ಜಮಾ ಆಗಿದ್ಯಾ ಎಂದು ಹೀಗೆ ಚೆಕ್ ಮಾಡಿ
ಒಡಿಶಾದ ಭುವನೇಶ್ವರದಲ್ಲಿ ನಡೆದ ಅಥ್ಲೆಟಿಕ್ ಚಾಂಪಿಯನ್ ಶಿಪ್ 100 ಮೀಟರ್ ಓಟದಲ್ಲಿ 11 ಸೆಕೆಂಡ್ ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಪಂಚಾಯಿತಿಯ ಸತ್ಯನಾರಾಯಣ ಎಸ್.ಎಸ್ ಹಾಗೂ ಶಾಲಿನಿ ಕೆ.ಎ ಅವರ ಪುತ್ರಿಯಾಗಿರುವ ಸ್ನೇಹಾ ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ; ಇಲ್ಲ ಅಂದ್ರೆ ಸಿಗಲ್ಲ ಸರ್ಕಾರದ ಯೋಜನೆ; ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್
ಇವರಿಗೆ ರಾಷ್ಟ್ರೀಯ ಕ್ರೀಡಾಕೂಟ 2023 ಗೋವಾದಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 4×100 ಮೀಟರ್ ರಿಲೇಯಲ್ಲಿ ಕಂಚು, ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಶಿಪ್ 2023-ಬೆಂಗಳೂರಿನಲ್ಲಿ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ದಸರಾ ಸಿಎಂ ಕಪ್ 2023-ಮೈಸೂರಿನಲ್ಲಿ 100 ಮೀಟರ್ ಓಟದಲ್ಲಿ ಚಿನ್ನದ ಪದಕ, ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ -ತಮಿಳುನಾಡು ಅಥ್ಲೆಟಿಕ್ಸ್ ನಲ್ಲಿ 100 ಮೀಟರ್ ಮತ್ತು 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ, ದಕ್ಷಿಣ ವಲಯದ ಅಥ್ಲೆಟಿಕ್ ಚಾಂಪಿಯನ್ ಶಿಪ್ – ಚೆನ್ನೈ ನಲ್ಲಿ 100 ಮೀಟರ್ ಮತ್ತು 4×100 ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನು ಕಳೆದ ವರ್ಷ ಪಡೆದಿದ್ದಾರೆ.












