ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕುಂತೂರು ಗ್ರಾಮದ ಭಗವತಿ ಶ್ರೀ ವಾರಾಹೀ ಅಮ್ಮನವರ ಶರನ್ನವರಾತ್ರಿ ಮಹೋತ್ಸವೂ 22-09-2025 ರಿಂದ 02-10-2025ರ ವರೆಗೆ ನಡೆಯಲಿದೆ.
ಇದನ್ನೂ ಓದಿ: ಮತ್ತೊಮ್ಮೆ ವಿದ್ಯುತ್ ದರ ಏರಿಕೆ; ರಾಜ್ಯದ ಜನತೆಗೆ ಕರೆಂಟ್ ಶಾಕ್

22-09-2025 ಸೋಮವಾರದಿಂದ 02-10-2025 ಗುರುವಾರದವರೆಗೆ ಪುರಾಣ ಪ್ರಸಿದ್ಧ ಭಗವತಿ ಶ್ರೀ ವಾರಾಹೀ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅತ್ಯಂತ ವೈಭವದೊಂದಿಗೆ ಆಚರಿಸಲಾಗುತ್ತದೆ. ಪ್ರತಿದಿನವೂ ಭಗವತಿ ಶ್ರೀ ವಾರಾಹೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಮಹಾ ಪೂಜೆ, ದುರ್ಗಾಸಪ್ತಶತಿ ಪಾರಾಯಣ, ಹೋಮಾದಿ ದೇವತಾ ಕಾರ್ಯಗಳು ನೆರವೇರಲಿದ್ದು, ಸಮಸ್ತ ಭಕ್ತಾಧಿಗಳು ದೇವತಾ ಕಾರ್ಯಗಳಲ್ಲಿ ಪಾಲ್ಗೊಂಡು, ಭಗವತಿ ಶ್ರೀ ವಾರಾಹೀ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ವತಿಯಿಂದ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಯೋಜನೆಯಡಿ ತಿಂಗಳಿಗೆ ಸಿಗಲಿದೆ 5000 ರೂ!












