ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯನ್ನು ಕಾಡಾನೆಯೊಂದು ಸೊಂಡಿಲಿನಿಂದ ಎತ್ತಿ ಬಿಸಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಷನ್!

ಭಾನುವಾರ ಮುಂಜಾನೆ ನಾರಾಯಣಗೌಡ ಅವರು ಮನೆಯ ಹೊರಭಾಗದಲ್ಲಿ ಮಲಗಿದ್ದ ವೇಳೆ ಮುಂಜಾನೆ ಸುಮಾರು ಐದು ಗಂಟೆಯ ವೇಳೆಗೆ ಕಾಡಾನೆ ದಾಳಿ ನಡೆಸಿದ್ದು, ಈ ಸಂದರ್ಭ ಮಲಗಿದ್ದ ನಾರಾಯಣ ಗೌಡ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಈ ವೇಳೆ ನಾರಾಯಣ ಗೌಡ ಹುಲ್ಲಿನ ರಾಶಿಯ ಮೇಲೆ ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕೆನರಾ ಬ್ಯಾಂಕ್ ನಲ್ಲಿ ಜಾಬ್ ಆಫರ್; ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್
ಮಲೆನಾಡಲ್ಲಿ ಹೆಚ್ಚಾಯ್ತು ಕಾಡುಪ್ರಾಣಿಗಳ ಹಾವಳಿ..!!
ಮಲೆನಾಡ ಅರಣ್ಯ ಪ್ರದೇಶದ ಗ್ರಾಮಗಳಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ, ಪ್ರಾಣ ರಕ್ಷಣೆಯ ಆತಂಕ ಎದುರಾಗಿದೆ. ಪ್ರಾಣ ಹಾನಿ ಮಾಡುವ ಶಕ್ತಿಯುಳ್ಳ ವನ್ಯ ಜೀವಿಗಳು ಯಾವ ಘಳಿಗೆಯಲ್ಲೂ ಗ್ರಾಮಸ್ಥರ ಮೇಲೆ ಎರಗಬಹುದಾಗಿದೆ. ಕೆಲ ವರ್ಷದ ಹಿಂದೆ ಬೆಳೆ ಹಾನಿ ಮಾಡುತ್ತಿದ್ದ ವನ್ಯ ಜೀವಿಗಳು ಇತ್ತೀಚೆಗೆ ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಹಲವಾರು ಗ್ರಾಮಗಳ ಜನರು ವನ್ಯಜೀವಿಗಳ ಕಾಟಕ್ಕೆ ಅಕ್ಷರಶಃ ನಲುಗಿದ್ದಾರೆ. ಬೆಳೆ ಹಾನಿ ಜೊತೆಗೆ ಪ್ರಾಣಿ ಹಾನಿಯ ಭೀತಿ ಮೂಡಿದ್ದು ಕಾಡಂಚಿನ ಗ್ರಾಮಗಳ ವಾಸ ನರಕಯಾತನೆಯಂತಾಗಿದೆ.
ಇದನ್ನೂ ಓದಿ: ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ದಿನ ಜಮಾ!; ಹಣ ಬಾರದೇ ಇದ್ದಲ್ಲಿ ಜಸ್ಟ್ ಈ ರೀತಿ ಮಾಡಿ
ಇತ್ತೀಚಿಗೆ ಅರಣ್ಯ ಪ್ರದೇಶದಲ್ಲಿ ಪ್ರಾಣಾಘಾತ ಉಂಟು ಮಾಡುವ ಹುಲಿ, ಚಿರತೆ, ಕಾಡುಕೋಣ, ಕಾಡಾನೆ ಮನೆ ಬಾಗಿಲಿಗೆ ಬಂದು ಸಾಕು ಪ್ರಾಣಿಗಳನ್ನು ಸಾಯಿಸುತ್ತಿವೆ. ಅಲ್ಲದೆ ರೈತರ ಜಮೀನಿನಲ್ಲಿ ಬೆಳೆಗಾನಿ ಮಾಡುತ್ತಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ ಮೌಲ್ಯದ ಬೆಳೆ ನಷ್ಟವಾಗುತ್ತಿದ್ದರೂ ಅರಣ್ಯ ಇಲಾಖೆ ಅಲ್ಪ ಮೊತ್ತದ ಪರಿಹಾರ ಕೊಟ್ಟು ಸಾಗಹಾಕುತ್ತಿದೆ.
ಹೀಗಾಗಿ ಮಲೆನಾಡು ಭಾಗದ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳು ಶಾಪವಾಗಿ ಪರಿಣಮಿಸಿದೆ. ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ













