ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಕುಟುಂಬವೊಂದಕ್ಕೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ಕೇಳಿಬಂದಿದೆ, ಈ ಕುರಿತು ಯುವತಿ ಕುಟುಂಬವು ಪೊಲೀಸ್ ಠಾಣೆಗೆ ದೂರು ನೀಡಿದೆ.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಪ್ರೀತಿ ನಿರಾಕರಿಸಿದಲ್ಲಿ ಹತ್ಯೆಗೆಯ್ಯುವ ಬೆದರಿಕೆ:
ಕೆಲವು ದಿನಗಳ ಹಿಂದೆ ಮುಸ್ಲಿಂ ಯುವಕ ಸೈಯದ್ ಸಲ್ಮಾನ್ ಎಂಬಾಂತ ಯುವತಿಯೊಬ್ಬಳನ್ನು ಪ್ರೀತಿಸುವಂತೆ ಪದೇ ಪದೇ ಫೋನ್ ಮಾಡಿ ಪೀಡಿಸುತ್ತಿದ್ದ ಹಾಗೂ ಪ್ರೀತಿ ನಿರಾಕರಿಸಿದಲ್ಲಿ ಹತ್ಯೆಗಯ್ಯುವ ಬೆದರಿಕೆಯನ್ನು ಹಾಕುತ್ತಿದ್ದಾನೆ ಎಂದು ಯುವತಿಯ ಕುಟುಂಬದವರು ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಯುವಕ ಸೈಯದ್ ಸಲ್ಮಾನ್ ವಿರುದ್ಧ ದೂರು ದಾಖಲಿಸಿದ್ದರು.

ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!
ಕೇಸ್ ವಾಪಸ್ ಪಡೆಯುವಂತೆ ಜೀವ ಬೆದರಿಕೆ:
ಆದರೆ ಈಗ ಕೇಸ್ ವಾಪಸ್ ಪಡೆದುಕೊಳ್ಳಿ ಇಲ್ಲವಾದರೆ ಹೈಕೋರ್ಟ್ ಗೆ ಹೋಗಿ ಮಗಳ ಮಾನ ಕಳೆಯುತ್ತೇನೆ. ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಸುಮ್ಮನೆ ಬಿಡುವುದಿಲ್ಲವೆಂದು ಯುವತಿಯ ತಾಯಿಗೆ ಕರೆ ಮಾಡಿ ಜೀವ ಬೆದರಿಕ ಹಾಕುತ್ತಿದ್ದಾನೆ. ಹೀಗಾಗಿ ಯುವಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವತಿ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮದ್ಯದಂಗಡಿ ಮಾಲೀಕರಿಗೆ ಗುಡ್ ನ್ಯೂಸ್; ಏನದು?















