ಚಿಕ್ಕಮಗಳೂರಿನ ಯುಗಚಿ ಡ್ಯಾಂ ಹೋಗುವ ನೀರಿನ ಕಾಲುವೆ ಬಳಿ ಗೋವಿನ ಅವಶೇಷಗಳು ಪತ್ತೆಯಾಗಿದ್ದು, ಇದು ಹಿಂದೂ ಸಂಘಟನೆಯನ್ನು ಕೆರಳಿಸುವಂತೆ ಮಾಡಿದೆ.
ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳ ಗಮನಕ್ಕೆ; 25,000 ರೂ ಸ್ಕಾಲರ್ಶಿಪ್ ಲಭ್ಯ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ಪೊಲೀಸರ ವಿರುದ್ಧ ಆಕ್ರೋಶ:
ಗೋ ಹತ್ಯೆ ನಿಷೇಧ ಕಾನೂನು ಇದೆ ಆದರೂ ಸಹ ಕಾನೂನಿನ ವಿರುದ್ಧವಾಗಿ ಅಕ್ರಮವಾಗಿ ಗೋ ಹತ್ಯೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಯುಗಚಿ ಡ್ಯಾಂ ಹೋಗುವ ನೀರಿನ ಕಾಲುವೆಗೆ ಅವಶೇಷಗಳನ್ನು ತಂದು ಹಾಕಿ ರಸ್ತೆಲೆಲ್ಲಾ ಅವಶೇಷಗಳದೇ ದರ್ಬಾರಾಗಿದೆ.
ಗೋ ಹತ್ಯೆ ನಿಷೇಧ ಕಾನೂನು ಅಡಿಯಲ್ಲಿ ಬಂಧಿಸಿದವರನ್ನು ಒಂದೇ ದಿನಕ್ಕೆ ಜಾಮೀನು ಕೊಟ್ಟು ಕೋರ್ಟ್ ಹೊರ ಕಳಿಸುತ್ತಿದೆ. ಕಾನೂನು ಸುವ್ಯಸ್ತೀಯ ಜೊತೆಯಲ್ಲಿ ಈ ಅಕ್ರಮವನ್ನು ತಡೆಯುವುದಕ್ಕೆ ಹೋಗಬೇಕಾದರೆ ಅಧಿಕಾರಿಗಳೇ ಅವರಿಗೆ ಮಾಹಿತಿಯನ್ನು ನೀಡುತ್ತಿರುವುದು ಸಹ ಬೆಳಕಿಗೆ ಬಂದಿದೆ. ಗೋ ಮಾಂಸ ದಂಧೆಗೆ ರಕ್ಷಾ ಕವಚ ಆಗಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅವರಿಗೆ ಧಿಕ್ಕಾರವಿರಲಿ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇ-ಖಾತೆ ಪಡೆಯುವುದು ಇನ್ನು ಸುಲಭ; ಈ ದಾಖಲೆಯ ಅಗತ್ಯವಿಲ್ಲ
ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಯಾವಾಗ ?
ಗೋ ಹತ್ಯಾ ನಿಷೇಧವಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಪ್ರತಿದಿನ ಜಿಲ್ಲೆಯಲ್ಲಿ ಅಕ್ರಮ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಗೋಸಾಗಾಟವನ್ನು ಹಿಂದೂ ಸಂಘಟನೆ ಹಾಗೂ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದರೂ ಕೂಡ ಆರೋಪಿಗಳು ಕೆಲವೇ ಗಂಟೆಯಲ್ಲಿ ಜಾಮೀನು ಪಡೆದು ಬರುತ್ತಿದ್ದಾರೆ. ಹೀಗಾಗಿ ಗೋ ಹತ್ಯೆ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ.












