ಶೃಂಗೇರಿ: ಅಡಿಕೆ ಬೆಳೆಗಾರರ ಹಿತಕ್ಕಾಗಿ ಲಲಿತ ಹೋಮ ಸಂಕಲ್ಪ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಡಿಕೆ ಬೆಳೆಗಾರರ ಹಿತಕ್ಕಾಗಿ ಇದೇ ಸೋಮವಾರ (3.02.2025) ಶ್ರೀ ಮಠದ ಯಾಗಶಾಲೆಯಲ್ಲಿ ಲಲಿತ ಹೋಮ ಸಂಕಲ್ಪ ಹಾಗೂ ಲಲಿತಾ ಹೋಮ ಹಾಗೆಯೇ ಬೆಟ್ಟದ ಶ್ರೀ ಮಲಹಾನಿಕೇಶ್ವರ ದೇವರ ಸನ್ನಿಧಿಯಲ್ಲಿ ರುದ್ರ ಹೋಮ ಸಂಕಲ್ಪ ಹಾಗೂ ರುದ್ರ ಹೋಮ ನೆರವೇರಲಿದೆ.


ಇದನ್ನೂ ಓದಿ: PUC ಪಾಸ್‌ ಆದ ವಿದ್ಯಾರ್ಥಿಗಳ ಗಮನಕ್ಕೆ; 25,000 ರೂ ಸ್ಕಾಲರ್ಶಿಪ್‌ ಲಭ್ಯ ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಈ ಹಿಂದೆ ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿರೋಗ ಬಂದಂತಹ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಲಾಗಿತ್ತು. ಅದರಂತೆ ಪ್ರತಿ ವರ್ಷವೂ ಅಡಿಕೆ ಬೆಳೆಗಾರರ ಹಿತಕ್ಕಾಗಿ ಲಕ್ಷ ಕುಂಕುಮಾರ್ಚನೆ, ಲಲಿತಾ ಹೋಮ ಹಾಗೂ ರುದ್ರ ಹೋಮಗಳನ್ನು ನಡೆಸಲಾಗುತ್ತಿದೆ.


ಇದನ್ನೂ ಓದಿ: ಇ-ಖಾತೆ ಪಡೆಯುವುದು ಇನ್ನು ಸುಲಭ; ಈ ದಾಖಲೆಯ ಅಗತ್ಯವಿಲ್ಲ


ಈ ಭಾರೀ 02.02.2025 ನೇ ಭಾನುವಾರ ಸಂಜೆ 5:30 ಕ್ಕೆ ಸರಿಯಾಗಿ ಶಾರದ ಪೀಠದಲ್ಲಿ ಲಕ್ಷ ಕುಂಕುಮಾರ್ಚನೆ ಸಂಕಲ್ಪ ಹಾಗೂ ಕುಂಕುಮಾರ್ಚನೆ ನೆರವೇರಲಿದೆ. 03.02.2025 ನೇ ಸೋಮವಾರ ದಂದು 8.30 ಕ್ಕೆ ಶ್ರೀ ಮಠದ ಯಾಗಶಾಲೆಯಲ್ಲಿ ಲಲಿತ ಹೋಮ ಸಂಕಲ್ಪ ಹಾಗೂ ಲಲಿತಾ ಹೋಮ. ಹಾಗೆಯೇ ಬೆಟ್ಟದ ಶ್ರೀ ಮಲಹಾನಿಕೇಶ್ವರ ದೇವರ ಸನ್ನಿಧಿಯಲ್ಲಿ ರುದ್ರ ಹೋಮ ಸಂಕಲ್ಪ ಹಾಗೂ ರುದ್ರ ಹೋಮ ನೆರವೇರಲಿದೆ.

ಬೆಳೆಗಾರರ ಹಿತಕ್ಕಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಡಿಕೆ ಸಂಕಷ್ಟ ಪರಿಹಾರ ಸಮಿತಿ ತಿಳಿಸಿದೆ.


ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – 30 ಸಾವು; ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಿದ ಸೇನೆ, ಪೊಲೀಸ್, ಹಾಗೂ ವೈದ್ಯರ ತಂಡ ; ತಪ್ಪಿದ ಮಹಾ ದುರಂತ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.