ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಹಲವಾರು ದಿನಗಳಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಗೋ ಕಳ್ಳತನವಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದವು. ಇದೀಗ ತೀರ್ಥಹಳ್ಳಿ ಪೊಲೀಸರು ಪಟ್ಟಣದ ಬೆಟ್ಟಮಕ್ಕಿಯ ಭೂತರಾಯನಕಟ್ಟೆ ಬಳಿ ಗೋ ಕಳ್ಳತನ ಮಾಡಲು ಬಂದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮೌಸಿನ್ ಖಾನ್ (25), ಮಹಮದ್ ಮುಸ್ತಾಕ್ (27), ಶಿರಾಜ್ ಉದ್ದೀನ್ (26), ಸೈಯ್ಯದ್ ಜಬೀವುಲ್ಲಾ, ಎಜಾಜ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?

ಪ್ರತಿ ನಿತ್ಯ ಗೋ ಕಳ್ಳತನ ಮಾಡಿ ಗೋ ಸಾಗಾಟ ಮಾಡಲಾಗುತ್ತಿತ್ತು. ಇದರಿಂದ ಜಾಗೃತಗೊಂಡ ಪೊಲೀಸ್ ತಂಡ ಬೆಟ್ಟಮಕ್ಕಿ ಬಳಿ ಓಮಿನಿ ಕಾರಿನ ಮೂಲಕ ಗೋ ಕಳ್ಳತನ ಮಾಡಲು ಬಂದಾಗಲೇ ಪೋಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಮತ್ತು ಕಳ್ಳತನ ಮಾಡಲು ತಂದಿದ್ದ ಓಮಿನಿ ಕಾರನ್ನು ವಶಕ್ಕೆ ಪಡೆದು ಕಾನೂನು ಕ್ರಮವನ್ನು ಜರುಗಿಸಲಾಗಿದೆ.
ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ
ಸರ್ಕಲ್ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ರವರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಗೋ ಕಳ್ಳರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಜಾಬ್ ಆಫರ್; 23.000 ಸಂಬಳ












