ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಗುರುವಾರ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್‌ನ ಮಾಲೀಕರ ಮನೆಯಲ್ಲಿ 6 ಲಕ್ಷ ನಗದು ಮತ್ತು 37.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂರು ಜನ ನೇಪಾಳದ ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ. ರಾಜೇಂದ್ರ ಶೇರ್ ಬಾಯ್ (30), ಏಕೇಂದ್ರ ಕುಟಲ್ ಬದ್ವಾಲ್ (31) ಕರಂ ಸಿಂಗ್ ಬಹದ್ದೂರ್ ದಾಮಡಿ ಬಂಧಿತ ಆರೋಪಿಗಳು.
ಇದನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಆರೋಪಿಗಳಿಂದ 1.5 ಕೋಟಿ ಮೌಲ್ಯದ 1 ಕೆಜಿ 800 ಗ್ರಾಂ.ತೂಕದ ಚಿನ್ನ, 1 ಕೆಜಿ 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ಜು ಈ ಕಾರ್ಯಚಾರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೆ.ಟಿ.ಜಯಕುಮಾರ್ ರವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿ ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ತಿಪ್ಪೇಸ್ವಾಮಿ, ಸೆನ್ ಠಾಣೆ ಪಿಎಸ್‌ಐ ಖಾದರ್, ಹರೀಶ್ ಸಿಪಿಸಿ-196. ರಮೇಶ ಸಿ.ಪಿ.ಸಿ.468 ಹಾಗೂ ಕೊಪ್ಪ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಾಲಾಜಿಸಿಂಗ್, ಪಿ.ಎಸ್.ಐ ಬಸವರಾಜ ಜಿ.ಕೆ ಹಾಗೂ ಹೆಚ್ ಸಿ 150 ತಿಪ್ಪೇಶ, ಪಿ.ಸಿ.628 ಯುವರಾಜ, ಪಿ.ಸಿ.701 ಪ್ರಕಾಶ ಒಳಗೊಂಡ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಇದ್ದರು.
ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಿಗಲಿದೆ 5000 ರೂ; ಅರ್ಜಿ ಸಲ್ಲಿಸುವುದು ಹೇಗೆ?












