ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮನೆ ಕಳವು ಪ್ರಕರಣದಲ್ಲಿ ಆರೋಪಿ ಓರ್ವನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿ 23.12.2019 ರಂದು ಮನೆಯೊಂದರ ಹಿಂಭಾಗದ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ತೆಗೆದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ 4 ಲಕ್ಷ ಬೆಲೆ ಬಾಳುವ 134 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂಡಿಗೆರೆ ನ್ಯಾಯಾಲಯ ಆರೋಪಿಯಾದ ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪುರ ನಿವಾಸಿ ಸುರೇಶ ಎ (27) ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದೆ.

ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್ ಶಿಪ್ ಗೆ ಹೀಗೆ ಅರ್ಜಿ ಸಲ್ಲಿಸಿ
ಪ್ರಧಾನ ಸಹಾಯಕ ಸರ್ಕಾರಿ ಅಭಿಯೋಜಕರಾದ ರೂಪ ಟಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ. ಪ್ರಕರಣದ ಕೋರ್ಟ್ ಮಾನಿಟರಿಂಗ್ ಅನ್ನು ಶ್ರೀನಾಥ್ ರೆಡ್ಡಿ, ಪಿ.ಎಸ್.ಐ. ಮೂಡಿಗೆರೆ ಪೊಲೀಸ್ ಠಾಣೆ, ಕೋರ್ಟ್ ಕರ್ತವ್ಯವನ್ನು ಸಂತೋಷ್ ಕುಮಾರ್ ಹೆಚ್. ಎಲ್, ಸಿ.ಪಿ.ಸಿ. ಮತ್ತು ಪ್ರೋಸೆಸ್ ಕರ್ತವ್ಯವನ್ನು ಜಗದೀಶ ಎಸ್ ಜಿ, ಸಿ.ಹೆಚ್.ಸಿ. ಮತ್ತು ಮಹೇಂದ್ರ, ಸಿ.ಪಿ.ಸಿ. ರವರು ನಿರ್ವಹಿಸಿರುತ್ತಾರೆ.
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ













