ಮಲೆನಾಡಿನಲ್ಲಿ ಹೊರರಾಜ್ಯದವರು ನಡೆಸುತ್ತಿರುವ ವ್ಯಾಪಾರ, ಉದ್ಯಮದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಿ!

ಮಲೆನಾಡಿನಲ್ಲಿ ಹೊರರಾಜ್ಯದವರು ನಡೆಸುತ್ತಿರುವ ವ್ಯಾಪಾರ, ಉದ್ಯಮದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು ಎಂಬ ಚರ್ಚೆಯೊಂದು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬಂದಿದೆ.


ಇದನ್ನೂ ಓದಿ: ಬಿಗ್ ಬಾಸ್​ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?


ವಿವಿಧ ರಾಜ್ಯಗಳಿಂದ ಬಂದು ವ್ಯಾಪಾರ, ಉದ್ಯಮ ಮಾಡುತ್ತಿರುವ ಉದ್ಯಮಪತಿಗಳು ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಇರುವುದು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತಿದೆ, ಹಾಗೂ ತಮ್ಮ ರಾಜ್ಯದಿಂದಲೇ ಕೆಲಸಕ್ಕೆ ಜನರನ್ನು ಕರೆಸಿಕೊಳ್ಳುವ ಮೂಲಕ ಸ್ಥಳೀಯರಿಗೆ ಉದ್ಯೋಗ ಅವಕಾಶ ಸರಿಯಾಗಿ ಸಿಗದೆ ಅನ್ಯಾಯವಾಗುತ್ತಿದೆ. ಮತ್ತೊಂದೆಡೆ ಸ್ಥಳೀಯ ವ್ಯಾಪಾರಸ್ಥರಿಗೆ ಆರ್ಥಿಕ ಹೊಡೆತವಾಗುತ್ತಿದ್ದು ಅದರಿಂದ ಸ್ಥಳೀಯರಿಗೆ ಉದ್ಯೋಗವೂ ಕಡಿತವಾಗುತ್ತಿದೆ. ಆದ್ದರಿಂದ ಸ್ಥಳೀಯರಿಗೆ ಕನಿಷ್ಠ 50% ಆದರೂ ಆದ್ಯತೆ ನೀಡಬೇಕು ಎಂಬ ಚರ್ಚೆಯಾಗುತ್ತಿದೆ.


ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ


ಮಲೆನಾಡಿನ ಭಾಗದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯಾಪಾರ ಉದ್ಯಮಗಳು ಇದ್ದು, ಬಹಳಷ್ಟು ಹೊರರಾಜ್ಯದ ಉದ್ಯಮಿಗಳು ನೆಲೆಯೂರಿದ್ದಾರೆ ಹಾಗೂ ವ್ಯಾಪಾರವನ್ನು ವಿಸ್ತರಣೆ ಸಹ ಮಾಡಿದ್ದಾರೆ. ಆದರೆ ಸ್ಥಳೀಯರಿಗೆ ಯಾವುದೇ ಉದ್ಯೋಗ ನೀಡುತ್ತಿಲ್ಲ, ಮಲೆನಾಡಿನಲ್ಲಿ ಉದ್ಯೋಗ ಸೃಷ್ಟಿಸುವ ಬೃಹತ್ ಯೋಜನೆಗಳು ಯಾವುವೂ ಇಲ್ಲದಿರುವುದರಿಂದ ಸ್ಥಳೀಯ ಯುವಕ, ಯುವತಿಯರು ಬಹಳಷ್ಟು ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ನೆಲ ಜಲ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ವ್ಯಾಪಾರ ನಡೆಸುತ್ತಿರುವವರ ವ್ಯಾಪಾರ ಸ್ಥಳೀಯರ ಮೇಲೆಯೇ ಅವಲಂಬಿತವಾಗಿದ್ದರೂ ಸ್ಥಳೀಯ ಆಕಾಂಕ್ಷಿಗಳಿಗೆ ಯಾವುದೇ ಅವಕಾಶ ಸಿಗದೇ ಇರುವುದು ದೌರ್ಭಾಗ್ಯದ ಸಂಗತಿ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಭಿಯಾನ ವೊಂದನ್ನು ಮಾಡುವ ಅನಿವಾರ್ಯತೆ ಇದೆ ಎಂಬ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ.


ಇದನ್ನೂ ಓದಿ: 10th ಪಾಸ್‌ ಆದವರಿಗೆ ಜಾಬ್‌ ಆಫರ್; 23.000 ಸಂಬಳ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.