ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅಂಗಡಿ ಮಾಲೀಕನ ಮೇಲೆ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?

ಬಾಳಗಡಿ ರಸ್ತೆಯಲ್ಲಿರುವ ವೀಲ್ಡ್ ಅಲೈನ್ಮೆಂಟ್ ಅಂಗಡಿ ಮಾಲೀಕನ ಮೇಲೆ ರಾಡ್ನಿಂದ ಹಲ್ಲೆ ಮಾಡಲಾಗಿದೆ. ವೀಲ್ಡ್ ಅಲೈನ್ಮೆಂಟ್ ಅಂಗಡಿಗೆ ನುಗ್ಗಿದ ತಂಡ ಮಾಲೀಕ ಮಹಮ್ಮದ್ ತೌಸಿಫ್ ಎಂಬಾತನಿಗೆ ಮನಸೋಇಚ್ಛೆ ಹಲ್ಲೆ ನಡೆಸಿದೆ. ನಂತರ ಅಲ್ಲೇ ಇದ್ದ ರಾಡ್ನಿಂದ್ ತಲೆ ಭಾಗಕ್ಕೆ ಹೊಡೆದಿದೆ. ತಲೆಗೆ ಪೆಟ್ಟಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಡ್ನಿಂದ ಹಲ್ಲೆಗೈದ ಸುಭಾನ್, ಚೇತನ್ ಹಾಗೂ ಇವನ್ ವಿರುದ್ಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ












