ಕಡೂರು: (ನ್ಯೂಸ್ ಮಲ್ನಾಡ್ ವರದಿ) ಟಾಟಾನಗರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ಶನಿವಾರ ಮಧ್ಯಾಹ್ನ ರೈಲ್ವೇ ಪೊಲೀಸರ ಸಹಕಾರದಿಂದ ತಪಾಸಣೆ ನಡೆಸಿದ ಕಡೂರು ಅಬಕಾರಿ ಅಧಿಕಾರಿಗಳು ಸುಮಾರು 2.17 ಲಕ್ಷ ರೂ. ಮೌಲ್ಯದ ಮಾದಕ ಪದಾರ್ಥಗಳನ್ನು ಕಡೂರು ರೈಲ್ವೆ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಜೂರಿನಿಂದಲೂ ತಪಾಸಣೆ ಮಾಡಿಕೊಂಡು ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಅನುಮಾನಾಸ್ಪದ ಚೀಲದಲ್ಲಿದ್ದ ಒಂದೂವರೆ ಕಿಲೋ ಒಣ ಗಾಂಜಾ, 25 ಗ್ರಾಂ ಎಂಡಿಎಂಎ ಮತ್ತು 37 ಭಾಂಗ್ ಚಾಕೋಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಜಾಬ್; SSLC, PUC ವಿದ್ಯಾರ್ಹತೆ
ಚೀಲದ ವಾರಸುದಾರರು ಪತ್ತೆಯಾಗಿಲ್ಲ ಎಂದು ಕಡೂರು ಅಬಕಾರಿ ನಿರೀಕ್ಷಕ ಎಲ್.ಸಿ.ಸಂದೀಪ್ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ನಾಗೇಂದ್ರ, ಅಬಕಾರಿ ಸಿಬ್ಬಂದಿ ಉಮೇಶ್, ಈರಪ್ಪ, ಅಶೋಕ್ ಇದ್ದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಈ ಸಮುದಾಯದವರಿಗೆ ಭರ್ಜರಿ ಗುಡ್ ನ್ಯೂಸ್; ವಿವಿಧ ಯೋಜನೆಗೆ ಅರ್ಜಿ ಆಹ್ವಾನ












