ಕಳಸ: ದನಕಳ್ಳರ ಬೆನ್ನಟ್ಟಿ ಜಾನುವಾರು ಪಾರು ಮಾಡಿದ ಪೊಲೀಸರು

ಕಳಸ: (ನ್ಯೂಸ್ ಮಲ್ನಾಡ್ ವರದಿ) ಹೈಟೆಕ್ ಝೈಲೋ ಕಾರಿನಲ್ಲಿ ದನ ಕಳ್ಳತನ ಮಾಡುತ್ತಿದ್ದವರನ್ನು ಬೆನ್ನಟ್ಟಿ ನಾಲ್ಕು ಹಸುಗಳನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.


ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ 2500 ಹುದ್ದೆಗೆ ಅರ್ಜಿ ಆಹ್ವಾನ; ಈ ದಾಖಲೆ ಕಡ್ಡಾಯ


ಗುರುವಾರ (ಜು.10) ಮಧ್ಯರಾತ್ರಿ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸಿನಿಮಿಯ ರೀತಿಯಲ್ಲಿ ದನಗಳ್ಳರ ವಾಹನವನ್ನು ಚೇಸ್ ಮಾಡಿದ್ದರು. ಈ ವೇಳೆ ಆರೋಪಿಗಳು ಕಾರನ್ನು ಬಿಟ್ಟು ಎಸ್ಕೆಪ್ ಆಗಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ಮನೆ ಕಟ್ಟುವವರಿಗೆ ಕೇಂದ್ರದಿಂದ ಸಿಗಲಿದೆ ಹಣಕಾಸಿನ ಸಹಾಯ; ಇಲ್ಲಿದೆ ಸಂಪೂರ್ಣ ಮಾಹಿತಿ


ರಾಡ್ ಬೀಸಿರೋದು ಸುಳ್ಳು.. ಎಸ್ಪಿ ಸ್ಪಷ್ಟನೆ:
ದನಗಳ್ಳರ ವಾಹನವನ್ನು ಚೇಸ್ ಮಾಡುವ ವೇಳೆ ಪೊಲೀಸರ ಮೇಲೆ ಕಬ್ಬಿಣದ ರಾಡ್ ಬೀಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ರಾಡ್ ಬೀಸಿರೋದು ಸುಳ್ಳು ಎಂದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್‌ ಅಮಟೆ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: ಈ ಕಾರ್ಡ್ ಮಾಡಿಸಿ ಪ್ರತಿ ತಿಂಗಳು 1200 ಪಡೆಯಿರಿ; ಸರ್ಕಾರದಿಂದ ಬಂಪರ್ ಸೌಲಭ್ಯ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.