ಮೂಡಿಗೆರೆ: ತೋಟದಲ್ಲಿ ಜಾನುವಾರು ಹತ್ಯೆ: ಅಸ್ಸಾಂ ಮೂಲದ ಆರು ಆರೋಪಿಗಳ ಬಂಧನ

ಮೂಡಿಗೆರೆ:  (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಬಾಳೂರು ಹೋಬಳಿಯ ಮರ್ಕಲ್ ಎಸ್ಟೇಟ್ ಕಾಫಿ ತೋಟದೊಳಗೆ ಗುರುವಾರ ಮಧ್ಯಾಹ್ನ ಜಾನುವಾರು ಹತ್ಯೆಯಾಗಿ ಮಾಂಸ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಸಿದಂತೆ ಇದೀಗ ಅಸ್ಸಾಂ ಮೂಲದ ಆರೋಪಿಗಳಾದ ಅಜೀರ್ ಅಮ್ಮನ್, ಅಕ್ಕಾಸ್ ಅಲೀ, ನಜ್ರುಲ್ ಹಕ್, ಇಜಾಬುಲ್ ಹಕ್, ಮೆಹ‌ರ್ ಅಲಿ, ಮಂಜುಲ್ ಹಕ್ ನನ್ನು ಬಂಧಿಸಿದ್ದಾರೆ.


ನ್ನೂ ಓದಿ: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…!; ಅಂಚೆ ಅಚೇರಿಯಲ್ಲಿದೆ ಭರ್ಜರಿ ಸ್ಕೀಮ್


ಏನಿದು ಘಟನೆ:
ಜುಲೈ 9ರಂದು ಮಧ್ಯಾಹ್ನ 3:30ರಿಂದ ಸಂಜೆ 7:30ರ ಒಳಗೆ ಯಾರೋ ಅಪರಿಚಿತ ವ್ಯಕ್ತಿಗಳು ತೋಟದೊಳಗೆ ಒಂದು ಜಾನುವಾರುವನ್ನು (ಹಸು) ಹತ್ಯೆ ಮಾಡಿ ಮಾಂಸ ಮಾಡಿರುವುದು ಕಂಡು ಬಂದಿತ್ತು. ಜಾನುವಾರುವಿನ ತಲೆ, ಕಾಲುಗಳು, ಚರ್ಮ, ಮಾಂಸ, ಲಿವರ್, ಇತರೆ ಅಂಗಾಂಗಗಳು ಸ್ಥಳದಲ್ಲೇ ಪತ್ತೆಯಾಗಿತ್ತು.

ಸ್ಥಳ ಪರಿಶೀಲನೆಗೆ ಆಗಮಿಸಿದ ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಅವರ ಮಾಹಿತಿ ಪ್ರಕಾರ, ತೋಟದ ರೈಟರ್ ಅಭಿಲಾಷ್ ಅವರ ಹೇಳಿಕೆಯಂತೆ, ಅಸ್ಸಾಂ ಮೂಲದ ಸುಮಾರು 15 ಮಂದಿ ಕೂಲಿ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ತೋಟದ ಲೈನ್‌ನಲ್ಲಿ ವಾಸವಿದ್ದು, ಘಟನೆಯ ಸಮಯದಲ್ಲಿ ಕೆಲವರು ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿತ್ತು. ಮಾಂಸ ತಯಾರಿಸಲು ಮರದ ತುಂಡು ಹಾಗೂ ಅಂಗಾಂಗಗಳನ್ನು ಹೂಳಲು ಬಳಸಿದ ಗುದ್ದಲಿ ಸ್ಥಳದಲ್ಲಿ ಪತ್ತೆಯಾಗಿತ್ತು.


ನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಾಬ್; ವಿದ್ಯಾರ್ಹತೆ ಡಿಟೈಲ್ಸ್‌ ಇಲ್ಲಿದೆ ನೋಡಿ


ಜಾನುವಾರುವಿನ ಅಂಗಾಂಗಗಳನ್ನು ಪಶುವೈದ್ಯರ ಸಹಾಯದಿಂದ ಪರೀಕ್ಷಿಸಿ, ನಂತರ ಉಪ ವಿಭಾಗೀಯ ದಂಡಾಧಿಕಾರಿಗಳ ಅನುಮತಿಯನ್ನು ಪಡೆದು ನಾಶಪಡಿಸಲಾಗಿತ್ತು. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ 303(2) ಬಿ.ಎನ್.ಎಸ್ ಮತ್ತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 12(1) ಅನ್ವಯ ಪ್ರಕರಣ ದಾಖಲಾಗಿತ್ತು. ಇದೀಗ ಅಸ್ಸಾಂ ಮೂಲಕ ಆರು ಆರೋಪಿಗಳನ್ನು ಬಂಧಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.