ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಳುಮೆಣಸು ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 195 ಕೆಜಿ ಕಾಳುಮೆಣಸು ವಶಪಡಿಸಿಕೊಳ್ಳಲಾಗಿದೆ. ಪ್ರಜ್ವಲ್, ಸುನಿಲ್ ಬಂಧಿತ ಆರೋಪಿಗಳು.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ

ದಾಸರಹಳ್ಳಿ ತೋಟದ ಮನೆಯಲ್ಲಿಟ್ಟಿದ್ದ 195 ಕೆಜಿ ಕಾಳುಮೆಣಸನ್ನು ಯಾರೋ ಕಳವು ಮಾಡಿದ್ದಾರೆ ಎಂದು ಗ್ರಾಮಾಂತರ ಪೊಲೀಸರಿಗೆ ಅ.5ರಂದು ಎನ್.ಸಿ.ನಾಗರಾಜು ಎಂಬುವರು ದೂರು ನೀಡಿದ್ದರು. ಗ್ರಾಮಾಂತರ ಠಾಣೆ ಸಿಪಿಐ ಸಚಿನ್‌ಕುಮಾರ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ಎಸ್.ವಿ.ರಘುನಾಥ, ಸಿಬ್ಬಂದಿ ಲೋಹಿತ್, ರಮೇಶ, ಲಕ್ಷಣ, ಕಿರಣ, ಶಿವರಾಜ, ಶಶಿಧರ, ವಿನಾಯಕ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು ಹಾಗೂ 10 ಸಾವಿರ ರೂಪಾಯಿಯನ್ನು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 10th ಹಾಗೂ PUC ಪಾಸ್ ಆದವರಿಗೆ ಜಾಬ್ ಆಫರ್; ಆಕರ್ಷಕ ಸಂಬಳ












