ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೇವಲ ಮೂರು ಸಾವಿರ ರೂಪಾಯಿ ಸಾಲ ಮರಳಿಸದ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬರನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದ ಅಪರಾಧಿಗೆ ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರು ವರ್ಷ ಸಜೆ ಮತ್ತು ದಂಡ ವಿಧಿಸಿದೆ. ಆಲ್ದೂರು ಹೋಬಳಿ ಅಡ್ಡಮಕ್ಕಿಯ ಕಾಫಿ ತೋಟದ ಕೂಲಿ ಕಾರ್ಮಿಕ ಅಸ್ಸಾಂ ಮೂಲದ ಕೋರ್ನೋ ಬಹಾದೂರ್ ರೈ ಶಿಕ್ಷೆಗೆ ಒಳಗಾದವ.
ಇದನ್ನೂ ಓದಿ: 10th ಹಾಗೂ PUC ಪಾಸ್ ಆದವರಿಗೆ ಜಾಬ್ ಆಫರ್; ಆಕರ್ಷಕ ಸಂಬಳ

ರಶೀದುಲ್ಲ ಎಂಬುವವನು ಕೋರ್ನೋ ಬಹಾದೂರ್ ರೈನಿಂದ 3 ಸಾವಿರ ರೂ. ಸಾಲ ಪಡೆದಿದ್ದ. 2023ರ ಜೂ.20ರಂದು ಸಂಜೆ ಈ ವಿಚಾರದ ಪ್ರಶ್ನಿಸಿದ ಬಹಾದೂರ್ ರೈ ಕತ್ತಿಯಿಂದ ರಶೀದುಲ್ಲನ ತಲೆ ಭಾಗಕ್ಕೆ ಕಡಿಯಲು ಯತ್ನಿಸಿದ್ದು, ಇದನ್ನು ತಡೆಯಲು ಯತ್ನಿಸಿದಾಗ ರಶೀದುಲ್ಲನ ಕೈ ತುಂಡಾಗಿತ್ತು. ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಜಾಗ ಒತ್ತುವರಿ ಮಾಡಿಕೊಂಡವರಿಗೆ ಬಿಗ್ ಶಾಕ್; ಮುಲಾಜಿಲ್ಲದೆ ತೆರವು ಮಾಡುವಂತೆ CM ಸಿದ್ದರಾಮಯ್ಯ ಸೂಚನೆ!
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಸಿ.ಭಾನುಮತಿ ವಿಚಾರಣೆ ನಡೆಸಿ ಅಪರಾಧಿಗೆ 6 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಎಚ್.ಎಸ್.ಲೋಹಿತಾಶ್ವ ಆಚಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ: 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ; ಏನಿರಲಿದೆ? ಆಹಾರ ಕಿಟ್’ನಲ್ಲಿ












