ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಳುಮೆಣಸು ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಪೌರ ಕಾರ್ಮಿಕರ ಸೇವೆ ಕಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ; CM ಸಿದ್ದರಾಮಯ್ಯ ಘೋಷಣೆ!

ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿ ಗ್ರಾಮದ ಮನೆಯ ಮುಂದಿನ ಜಗುಲಿಯ ಮೇಲೆ ಸುಮಾರು 145 ಕೆಜಿ, ಕಾಳು ಮೆಣಸನ್ನು ಒಣಗಿಸಿ ದಾಸ್ತಾನು ಇಟ್ಟಿದ್ದರು. ಮನೆಯಿಂದ ಮೂಡಿಗೆರೆ ಪಟ್ಟಣಕ್ಕೆ ಹೋಗಿ ರಾತ್ರಿ ಮನೆಗೆ ಬಂದು ನೋಡಿದಾಗ ಮೂಟೆ ಮಾಡಿ ಇಟ್ಟಿದ್ದ ಒಟ್ಟು 145 ಕೆಜಿ, ಕಾಳು ಮೆಣಸು ಕಳ್ಳತನವಾಗಿತ್ತು. ಈ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿ ರೂ. 1.03 ಲಕ್ಷ ಮೌಲ್ಯದ 145 ಕೆ.ಜಿ. ಕಾಳು ಮೆಣಸು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 2PUC ಅಲ್ಲಿ 60% ತೆಗೆದಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಈ ಸಂದರ್ಭದಲ್ಲಿ ಸಿಪಿಐ ರಾಜಶೇಖರ್ ಕೆ ವಿ, ಪಿಎಸ್ಐ ಶ್ರೀನಾಥ್ ರೆಡ್ಡಿ, ಪಿಎಸ್ಐ ಶಶಿ ಟಿ ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ವೈಭವ್ ಟಿ ಎನ್, ಸಚ್ಚಿನ್ ವಿ ಎಸ್, ವಿನಯ್ ಕುಮಾರ್ ಮತ್ತು ಮೆಹಬೂಬ್ ಸದನಿ ಇದ್ದರು.
ಇದನ್ನೂ ಓದಿ: ಜಿಲ್ಲೆಯ ಅಂಗನವಾಡಿಯಲ್ಲಿ 10th ಪಾಸ್ ಆದವರಿಗೆ ಜಾಬ್; ಅರ್ಜಿ ಸಲ್ಲಿಸುವ ಲಿಂಕ್, ದಾಖಲೆ ಇಲ್ಲಿದೆ ನೋಡಿ












