ಒಂದೇ ದಿನ, ಒಂದೇ ಚಿರತೆ 3 ಹಳ್ಳಿಯಲ್ಲಿ ದಾಳಿ, ಐವರಿಗೆ ಗಾಯ

ಹಾಸನ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಅಂಕನಹಳ್ಳಿ, ಕಳ್ಳಿಮುದ್ದನಹಳ್ಳಿ, ಭೂವನಹಳ್ಳಿಯಲ್ಲಿ ಒಂದೇ ಚಿರತೆ ಒಂದೇ ದಿನದಲ್ಲಿ ಐವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ನಾಗರಾಜು, ಜಯಮ್ಮ, ಜಯಮ್ಮ (ಇಬ್ಬರು ಜಯಮ್ಮ) ನವೀನ್ ಗಾಯಾಳುಗಳು. ನವೀನ್ ತೊಡೆಗೆ ಪರಿಚಿದ್ದರೆ, ಜಯಮ್ಮ ಮುಖ ರಕ್ತಸಿಕ್ತವಾಗಿದೆ. ಬಳಿಕ ಅಂಕನಹಳ್ಳಿಯಲ್ಲಿ ವಸಂತ ಮನೆಗೆ ಚಿರತೆ ನುಗ್ಗಿದ್ದು ಮನೆಯವರು ಬಾಗಿಲು ಮುಚ್ಚಿ ಕೂಡಿಹಾಕಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ನೀಡಿ ಚಿರತೆ ಸೆರೆ ಹಿಡಿದಿದ್ದಾರೆ. ಐವರು ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಈ ಗ್ರಾಮಗಳ ಸುತ್ತಮುತ್ತ ಕಳೆದೊಂದು ವಾರದಿಂದ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸೆರೆಗೆ ಬೋನುಗಳನ್ನು ಇರಿಸಿದ್ದರೆಂದು, ಆದರೆ ಚಿರತೆ ಇಂದು ಬೆಳಿಗ್ಗೆ ಏಕಾಏಕಿ ಐವರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವುದು ಈ ಗ್ರಾಮಗಳ ಜನರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದಿಂದ ಈ ಗ್ರಾಮಗಳಲ್ಲಿನ ಜನರು ಸಂಜೆ ಆರು ಗಂಟೆಯಿಂದ ಮನೆಯಿಂದ ಹೊರಬಾರದೆ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಹ ಇದೆ. ಘಟನೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆಯ ಸೆರೆ ಹಿಡಿಯಲು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಆದರೆ ಈ ಘಟನೆ ನಂತರ ಚಿರತೆಯನ್ನು ಗ್ರಾಮದ ವಸಂತ ಎಂಬುವವರ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ. ಮೈಸೂರಿನಿಂದ ಆಗಮಿಸಿರುವ ಅರಣ್ಯ ಇಲಾಖೆಯ ವೈದ್ಯರು ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.