ಅಡಿಕೆ ಬೆಳೆಗಾರರಿಗೆ ಹೊಸ ಆಶಾಕಿರಣವಾದ ‘ಬಯೋಶಮನ’

ಅಡಿಕೆ ಬೆಳೆಗಳಲ್ಲಿ ಹೆಚ್ಚುತ್ತಿರುವ ಹಳದಿ ಎಲೆಚುಕ್ಕಿ ರೋಗ, ಕೊಳೆರೋಗ ಹಾಗೂ ಕೀಟಬಾಧೆ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ “ಬಯೋಶಮನ” ಮತ್ತು “ಬಯೋಬೀಟಲ್ ಶೀಲ್ಡ್” ಎಂಬ ಎರಡು ಜೈವಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೈಟೆಕ್ ದೋಟಿ ಹಾಗೂ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.

ಬಯೋಶಮನವನ್ನು ಶಿಲೀಂಧ್ರ ಹಾಗೂ ಎಲೆಚುಕ್ಕಿ ರೋಗಗಳ ನಿಯಂತ್ರಣಕ್ಕಾಗಿ ರೂಪಿಸಲಾಗಿದ್ದು, ಬಯೋಬೀಟಲ್ ಶೀಲ್ಡ್ ಅನ್ನು ವಿವಿಧ ಕೀಟಗಳ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎರಡೂ ಉತ್ಪನ್ನಗಳನ್ನು ರೈತರ ತೋಟಗಳಲ್ಲಿ ಪರೀಕ್ಷಿಸಿದಾಗ ಉತ್ತಮ ಫಲಿತಾಂಶ ದೊರೆತಿದೆ ಎಂದು ಅವರು ದಾವೆ ಮಾಡಿದ್ದಾರೆ.

ಅಡಿಕೆ ಮಾತ್ರವಲ್ಲದೆ ಕಾಫಿ, ಕಾಳುಮೆಣಸು, ತೆಂಗು, ತರಕಾರಿ ಹಾಗೂ ಇತರ ತೋಟಗಾರಿಕಾ ಬೆಳೆಗಳಲ್ಲಿಯೂ ಈ ಉತ್ಪನ್ನಗಳನ್ನು ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು 9606142520 ಅಥವಾ 7259350487 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.