ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ಇದನ್ನೂ ಓದಿ; ಗೃಹಲಕ್ಷ್ಮೀ ಹಣ ಬಂದಿಲ್ವಾ?; ಈ ದಾಖಲೆಗಳನ್ನು ಇವರಿಗೆ ತಲುಪಿಸಿ; ಇನ್ನು ಕೆಲವೇ ದಿನಗಳು ಮಾತ್ರ ಬಾಕಿ

ರಸ್ತೆ ಮಧ್ಯದಲ್ಲೇ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರಿನಲ್ಲಿದ್ದವರಿಗೆ ಪೆಟ್ಟಾಗಿದ್ದು, ಒಬ್ಬರಿಗೆ ಕಾಲು ಮುರಿತವಾಗಿದೆ. ಧರ್ಮಸ್ಥಳದಿಂದ ಹೊರನಾಡು ದೇವಸ್ಥಾನದ ದರ್ಶನಕ್ಕೆ ಹೊರಟ ನಿಪ್ಪಾಣಿ ಮೂಲದ ಪ್ರವಾಸಿಗರು ಎನ್ನಲಾಗಿದೆ.
ಇದನ್ನೂ ಓದಿ; ರಾಜೌರಿಯಲ್ಲಿ ಗುಂಡಿನ ಕಾಳಗ; ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ವರದಿ-ತನು ಕೊಟ್ಟಿಗೆಹಾರ)
ವೀರ ಸಾವರ್ಕರ್ ಬದುಕಿನ ಕಥಾನಕವನ್ನು ಪ್ರಸ್ತುತ ಪಡಿಸುವ “ಕರಿನೀರ ವೀರ” ನಾಟಕ ಪ್ರದರ್ಶನ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜ್ಞಾನಭಾರತೀ ಟ್ರಸ್ಟ್(ರಿ) ಶೃಂಗೇರಿ ಇವರ ಸಹಯೋಗದಲ್ಲಿ ಸಾವರ್ಕರ್ ಪ್ರತಿಷ್ಠಾನ, ಮೈಸೂರು ಇವರು ಪ್ರಸ್ತುತಪಡಿಸುವ ಖ್ಯಾತ ನಿರ್ದೇಶಕರಾದ ಅದ್ದಂಡ ಕಾರ್ಯಪ್ಪನವರ ನಿರ್ದೇಶನದಲ್ಲಿ ಕರಿನೀರ ವೀರ ಎಂಬ ವೀರ ಸಾವರ್ಕರ್ ಅವರ ಬದುಕಿನ ಕಥಾನಕವನ್ನು ಪ್ರಸ್ತುತಪಡಿಸುವ ಅದ್ಬುತ ನಾಟಕವು ಶೃಂಗೇರಿಯ ಡಾ|| ವಿ. ಆರ್ ಗೌರೀಶಂಕರ್ ಸಭಾಂಗಣದಲ್ಲಿ ಇದೇ ಡಿಸೆಂಬರ್ 1ನೇ ತಾರೀಖು ಶುಕ್ರವಾರ ಸಂಜೆ 6 ರಿಂದ 9ರವರಗೂ ಪ್ರದರ್ಶನಗೊಳ್ಳಲಿದೆ ಎಂದು ಆಯೋಜಕರಾದ ಅಭಿರಾಮ್ ಶೃಂಗೇರಿ ಮತ್ತು ಜ್ಞಾನ ಭಾರತೀ ಟ್ರಸ್ಟ್ ಶೃಂಗೇರಿಯ ಹೆಚ್. ಆರ್ ವಿಶ್ವನಾಥ್ ಅವರು ತಿಳಿಸಿದ್ದಾರೆ.
ಈ ಪ್ರದರ್ಶನದ ಪ್ರವೇಶ ದರ ರೂ 100/- ಇರಲಿದ್ದು.. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ:-9483634964, 9481651001 ಇದಕ್ಕೆ ಕರೆ ಮಾಡಬೇಕಾಗಿ ತಿಳಿಸಿದ್ದಾರೆ..
ಹಾಗೆಯೇ ಭಾರತೀ ಜಾಗೃತ ಪ್ರತಿಷ್ಠಾನ (ರಿ.) ನಾದ ಚೈತನ್ಯ (ರಿ.) ಸಂಗೀತ ಗಂಗಾ(ರಿ.), ಚಿಕ್ಕಮಗಳೂರು ಇವರ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿಯೂ ದಿನಾಂಕ 03 ಡಿಸೆಂಬರ್ 2023ರ ಭಾನುವಾರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.












