ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಮಾ.18) ನಗರಕ್ಕೆ ಆಗಮಿಸಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 2 ಲಕ್ಷ ಮಂದಿ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ; ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದು ಫ್ರೀಡಂ ಪಾರ್ಕ್ ನಲ್ಲಿ ಪ್ರಧಾನಿ ಮೋದಿ ಸಮಾವೇಶ ನಡೆಸಲಿದ್ದಾರೆ. ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಮಧ್ಯಾಹ್ನ 2 ಗಂಟೆಗೆ ಆಗಮಿಸಲಿರುವ ಮೋದಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.
ಮೋದಿ ಭೇಟಿ ಹಿನ್ನೆಲೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್:
ಮೋದಿ ಕಾರ್ಯಕ್ರಮಕ್ಕೆ ವಾಹನ ಸಂಚಾರವನ್ನ ನಿಯಂತ್ರಣಕ್ಕಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ತಾತ್ಕಾಲಿಕವಾಗಿ ಶೂನ್ಯ ಸಂಚಾರ ಮತ್ತು ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗಗಳನ್ನ ರಚಿಸಿ ಆದೇಶಿಸಿದ್ದಾರೆ.
18.03.2024 ಸೋಮವಾರ ಬೆಳಗ್ಗೆ 06-00 ರಿಂದ ಸಂಜೆ 06-00 ವರೆಗೆ ಶೂನ್ಯ ಸಂಚಾರ ಆದೇಶಿಸಿದ್ದಾರೆ.
ಇದನ್ನೂ ಓದಿ; ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್…!; ಏಳು ಹಂತಗಳಲ್ಲಿ ಮತದಾನ, ನಿಮ್ಮ ಕ್ಷೇತ್ರದಲ್ಲಿ ಯಾವಾಗ
- ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್ ಎಸ್ ಸರ್ಕಲ್ -ಶಂಕರಮಠ ಸರ್ಕಲ್ ಕರ್ನಾಟಕ ಸಂಘ-ಶಿವಪ್ಪ ನಾಯಕ ಸರ್ಕಲ್ -ಎಎ ಸರ್ಕಲ್-ಅಶೋಕ ಸರ್ಕಲ್-ಹೆಲಿಪ್ಯಾಡ್ ಸರ್ಕಲ್ ವರೆಗೆ
- ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್. ವಿನೋಬನಗರ 60 ಅಡಿ ರಸ್ತೆ, ಸೈಕಲೋತ್ಸವ ಸರ್ಕಲ್, ರಾಜ್ ಕುಮಾರ್ ಸರ್ಕಲ್ ವರೆಗೆ
- ಪೊಲೀಸ್ ಚೌಕಿಯಿಂದ ಉಷಾ ಸರ್ಕಲ್ ವರೆಗೆ ಲಕ್ಷ್ಮೀ ಚಲನಚಿತ್ರ ಮಂದಿರದ ವೃತ್ತದಿಂದ, ಜೈಲು ರಸ್ತೆ ಕುವೆಂಪು ರಸ್ತೆ ಮಾರ್ಗವಾಗಿ ಹೆಲಿಪ್ಯಾಡ್ ಮಾರ್ಗದ ವರೆಗೆ ಶೂನ್ಯ ಸಂಚಾರಕ್ಕೆ ಆದೇಶಿಸಲಾಗಿದೆ.
ಇದನ್ನೂ ಓದಿ; ರಾಜ್ಯಾದಾದ್ಯಂತ PDO ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಪ್ರಕಟ; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ವಾಹನಗಳ ಮಾರ್ಗ ಬದಲಾವಣೆ:
- ಸೋಮವಾರ ಬೆಳಿಗ್ಗೆ 06-00 ಗಂಟೆಯಿಂದ ಸಂಜೆ 06-00 ಗಂಟೆಯವರಗೆ ಎನ್.ಆರ್ ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲು-ಹುಣಸೆಕಟ್ಟೆ ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.
- ಶಿಕಾರಿಪುರ, ಹೊನ್ನಾಳಿ ಮತ್ತು ದಾವಣಗೆರೆ ಕಡೆಗೆ ಎನ್.ಆರ್.ಪುರ ಕಡೆಗೆ ಹೋಗುವ ವಾಹನಗಳು:- ಎನ್.ಟಿ ರಸ್ತೆ ಮೂಲಕ ಎನ್.ಆರ್ ಪುರಕ್ಕೆ ಹೋಗುವುದು. ಎಂ.ಆರ್.ಎಸ್ ಸರ್ಕಲ್ ಕಡೆಯಿಂದ ಬಿ,ಹೆಚ್ ರಸ್ತೆಯ ಮಾರ್ಗವಾಗಿ ಬಸ್ ಸ್ಟ್ಯಾಂಡ್ ಮತ್ತು ಸಾಗರ ತೀರ್ಥಹಳ್ಳಿ, ಹೊಸನಗರ ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲಾ ರೀತಿಯ ವಾಹನಗಳು ಎಂ, ಆರ್ ಎಸ್ ನಿಂದ ಬೈಪಾಸ್ ಮಾರ್ಗವಾಗಿ ಸಂದೇಶ್ ಮೋಟಾರ್ಸ್ ಸರ್ಕಲ್ – ಮಂಡ್ಲಿ ಸರ್ಕಲ್ – ಗೋಪಾಳ- ಆಲ್ಕೋಳ ಸರ್ಕಲ್ ಮಾರ್ಗವಾಗಿ ಹೋಗುವುದು.
- ಭದ್ರಾವತಿ, ಬೆಂಗಳೂರು ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲಾ ರೀತಿಯ ವಾಹನಗಳು ಆಳ ಸರ್ಕಲ್- ಗೋಪಾಳ – ಮಂಡ್ಲಿ ಸರ್ಕಲ್ -ಸಂದೇಶ್ ಮೋಟಾರ್ಸ್ ಸರ್ಕಲ್- ಬೈಪಾಸ್ ಮಾರ್ಗವಾಗಿ ಹೋಗುವುದು.
- ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು:- ಆಲ್ಕೊಳ ಸರ್ಕಲ್ -ಗೋಪಾಳ ಸರ್ಕಲ್-ನ್ಯೂ ಮಂಡ್ಲಿ- ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿಗೆ ರಸ್ತೆಗೆ ಸೇರುವುದು.
- ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು:- ನ್ಯೂ ಮಂಡ್ಲಿ ಸರ್ಕಲ್- ಗೋಪಾಳ ಸರ್ಕಲ್- ಅಯ್ಯೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.
- ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು- ಅಯನೂರು- ಹಾರನಹಳ್ಳಿ-ಸವಳಂಗ ಮಾರ್ಗವಾಗಿ ಚಲಿಸುವುದು.
- ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಸವಳಂಗ- ಹಾರಳಿ ಅಯನೂರು-ಮಾರ್ಗವಾಗಿ ಶಿವಮೊಗ್ಗಕ್ಕೆ ಬರುವುದು.
- ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಗಳಿಗೆ ಹೋಗುವ ಎಲ್ಲಾ ವಾಹನಗಳು :- ರಾಗಿಗುಡ್ಡ ಕುವೆಂಪು ನಗರದ ಮುಖಾಂತರ ಚಲಿಸುವುದು.
- ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ- ತಾಂಡಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು:-ಕುವೆಂಪು ನಗರ- ರಾಗಿಗುಡ್ಡ- ಸಂಗೋಳ್ಳಿರಾಯಣ್ಣ ಸರ್ಕಲ್- ಮುಖಾಂತರ ಚಲಿಸುವುದು.
- ಕುವೆಂಪು ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದ ಕಡೆಗೆ ಅಥವಾ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಜೈಲು ಸರ್ಕಲ್ ನಿಂದ ಎಡಕ್ಕೆ ತಿರುಗಿ, ಶಿವಮೊಗ್ಗ ಆಪ್ಟಿಕಲ್ಸ್ ಗೌರವ ಲಾಡ್ಜ್ ಸರ್ಕಲ್ ನಿಂದ ಬಲಕ್ಕೆ ತಿರುಗಿ ಬಸ್ಟ್ಯಾಂಡ್ ಗೆ ಬಂದು ಸೇರುವುದು.
- ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಜೈಲು ಸರ್ಕಲ್ ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಸವಾರರು ಅಶೋಕ ಸರ್ಕಲ್ ಮೂಲಕ ಬಿ.ಹೆಚ್ ರಸ್ತೆ ಗುಜರಿಕ್ರಾಸ್ ನಲ್ಲಿ (ವಿನಾಯಕ ಟಾಕೀಸ್ ಪಕ್ಕದ ರಸ್ತೆಯಲ್ಲಿ) ಎಡಕ್ಕೆ ತಿರುಗಿ ಗೌರವ ಲಾಡ್ಜ್ ಸರ್ಕಲ್ ಮಾರ್ಗವಾಗಿ ಜೈಲ್ ಸರ್ಕಲ್ ತಲುಪುವುದು.
- ಪೊಲೀಸ್ ಚೌಕಿ ಯಿಂದ ಬಸ್ ಸ್ಟಾಂಡ್ ಕಡೆಗೆ ಬರುವಂತಹ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಪೊಲೀಸ್ ಚೌಕಿ -ಕರಿಯಣ್ಣ ಬಿಲ್ಡಿಂಗ್ -ಅಮ್ಮೊಳ ಸರ್ಕಲ್ -ಆಯನೂರು ಗೇಟ್ ಮಾರ್ಗವಾಗಿ ಬಸ್ಟ್ಯಾಂಡ್ ಬಂದು ಸೇರುವುದು.
- ಲಕ್ಷ್ಮೀ ಟಾಕೀಸ್ ಸರ್ಕಲ್ ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಬರುವ ದ್ವಿಚಕ್ರ ಮತ್ತು ನಾಲ್ಕ ಚಕ್ರ ವಾಹನ ಸವಾರರು ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಮಹಾವೀರ ಸರ್ಕಲ್ -ಗೋಪಿ ಸರ್ಕಲ್ – ಎಎ ಸರ್ಕಲ್ ಮಾರ್ಗವಾಗಿ ಬಸ್ಟ್ಯಾಂಡ್ ಬಂದು ಸೇರುವುದು.
ಇದನ್ನೂ ಓದಿ; ಈ ಯೋಜನೆಯಡಿಯಲ್ಲಿ ಸಿಗಲಿದೆ ತ್ರಿಚಕ್ರ ವಾಹನ; ಈಗಲೇ ಅರ್ಜಿ ಸಲ್ಲಿಸಿ
ವಾಹನ ನಿಲುಗಡೆ ನಿಷೇಧ:
- ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್ ನಿಂದ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ (60 ಅಡಿ ರಸ್ತೆ)- ಸೈಕಲೋತ್ಸವ ಸರ್ಕಲ್ ನಿಂದ ವಿನೋಬನಗರ ಕೆ.ಇ.ಬಿ ಅಫೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
- ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆಯ ಜೈಲ್ ಸರ್ಕಲ್ ವರೆಗೆ ಹಾಗೂ ಜೈಲ್ ಸರ್ಕಲ್ ನಿಂದ ಲಕ್ಷ್ಮೀ ಟಾಕೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
- ರಾಜ್ ಕುಮಾರ್ ಸರ್ಕಲ್ ನಿಂದ ಮೇದಾರಿ ಕೇರಿರಸ್ತೆ ಬೋಮ್ಮನ ಕಟ್ಟೆ ರೈಲ್ವೆ ಗೇಟ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
- ಪೊಲೀಸ್ ಚೌಕಿಯಿಂದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನ ಕಟ್ಟೆ ರೈಲ್ವೇ ಗೆ ಹೋಗುವ ರಸ್ತೆ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
- ಚೌಕಿ ಮಾರ್ಗವಾಗಿ ಉಷಾ ಸರ್ಕಲ್ ವರೆಗೆ ರಸ್ತೆಯವರೆಗೆ ನಿಷೇಧಿಸಲಗಿದೆ. ಎರಡೂ ಬದಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.
- ಸೋಗಾನೆ ವಿಮಾನ ನಿಲ್ದಾಣನಿಂದ ಎಂ. ಆರ್. ಎಸ್ ಸರ್ಕಲ್ -ವಿದ್ಯಾನಗರ -ಶಂಕರಪುಟ ಸರ್ಕಲ್- ಕರ್ನಾಟಕ ಸಂಘ – ಎಸ್ ಎನ್ ಸರ್ಕಲ್ -ಎಎ ಸರ್ಕಲ್ – ಅಶೋಕ ಸರ್ಕಲ್ ಹೆಲಿಪ್ಯಾಡ್ ಸರ್ಕಲ್- ವರೆಗೆ ರಸ್ತೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿ ಡಿಸಿ ಆದೇಶಸಿದ್ದಾರೆ.
ಇದನ್ನೂ ಓದಿ; ದೇಶದ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ಘೋಷಣೆ; ಪ್ರತಿ ವರ್ಷ 1 ಲಕ್ಷ ಹಣ ಖಾತೆಗೆ ಜಮಾ!
ಕಾರ್ಯಕ್ರಮಕ್ಕೆ ಆಗಮಿಸಲಿರುವ ವಾಹನಗಳ ಮಾರ್ಗ:
- ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ನ್ಯೂ ಮಂಡ್ಲಿ ಎಡಕ್ಕೆ ತಿರುಗಿ ಗೋಪಾಳ ಸರ್ಕಲ್ -ಆಯ್ಯೋಳ ಸರ್ಕಲ್ ಬಲಕ್ಕೆ ತಿರುಗಿ ಎ.ಪಿ.ಎಂ.ಸಿ ಒಳ ಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳ ಭಾಗದಲ್ಲಿ ಪಾರ್ಕಿಂಗ್ ಮಾಡುವುದು. - ಸಾಗರ ಹೊಸನಗರ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ಅಯ್ಯೋಳ ಸರ್ಕಲ್ ಸಾಗರ ರಸ್ತೆ ಅಯ್ಯೋಳ ಸರ್ಕಲ್ -ಪೊಲೀಸ್ ಚೌಕಿಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಮತ್ತು ಸೋಮಿನಕೊಪ್ಪ ಆದರ್ಶನಗರ ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು. - ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ಬಸವನಗಂಗೂರು-ಬೊಮ್ಮನಕಟ್ಟೆ ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್,ಕೆ ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು. - ಹೊನ್ನಾಳಿ, ಹರಿಹರ ದಾವಣಗೆರೆ ಹಾವೇರಿ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ಸವಳಂಗ -ಬಸವನಗಂಗೂರು-ಬೊಮ್ಮನಕಟ್ಟೆ- ಮಾರ್ಗವಾಗಿ ಬೊಮ್ಮನಕಟ್ಟೆಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಬೊಮ್ಮನಕಟ್ಟೆ ಎಸ್.ಎಲ್.ಕೆ. ಲೇ ಔಟ್ ನಲ್ಲಿ ಪಾರ್ಕಿಂಗ್ ಮಾಡುವುದು. - ಭದ್ರಾವತಿ-ಚಿಕ್ಕಮಗಳೂರು ಎನ್ ಆರ್ ಪುರ -ಕೊಪ್ಪ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:-
ಎಂ.ಆರ್. ಎಸ್ ಸರ್ಕಲ್ -ಬೈ ಪಾಸ್ ರಸ್ತೆ ಸಂದೇಶ್ ಮೋಟಾರ್ಸ್ ಸರ್ಕಲ್ ನ್ಯೂ ಮಂಡ್ಲಿ ಸರ್ಕಲ್ -ಗೋಪಾಳ ಸರ್ಕಲ್ – ಆಯ್ಯೋಳ ಸರ್ಕಲ್ ಬಲಕ್ಕೆ – ಎ.ಪಿ.ಎಂ.ಸಿ ಒಳಭಾಗಕ್ಕೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ಎ.ಪಿ.ಎಂ.ಸಿ ಒಳಭಾಗದಲ್ಲಿ ಪಾರ್ಕಿಂಗ್ ಮಾಡುವುದು. - ಹೊಳೆಹೊನ್ನೂರು ಚನ್ನಗಿರಿ ಚಿತ್ರದುರ್ಗದ ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು:
ಹೊಳೆಹೊನ್ನೂರು ಸರ್ಕಲ್ -ಶಂಕರ ಮಠ ಸರ್ಕಲ್-ಕೆ.ಇ.ಬಿ. ಸರ್ಕಲ್ -ರೈಲ್ವೇ ನಿಲ್ದಾಣ ರಸ್ತೆ -ಉಷಾ ಸರ್ಕಲ್ ಗೆ ಬಂದು ಸಾರ್ವಜನಿಕರನ್ನು ಇಳಿಸಿದ ನಂತರ ಪಾರ್ಕಿಂಗ್ ಸ್ಥಳ ಗುರುತಿಸಿದ ನೆಹರು ಕ್ರೀಡಾಂಗಣ ,ಕುವೆಂಪು ರಂಗಮಂದಿರ,ಎನ್,ಇ,ಎಸ್ ಮೈದಾನ ಶೇಷಾದ್ರಿಪುರಂ ಗೂಡ್ಸ್ ಶೆಡ್, ಸೈನ್ಸ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.












