ಲೋಕಸಭಾ ಚುನಾವಣೆ: ಕೋವಿ/ಆಯುಧ ಠೇವಣಿ ಇಡುವಂತೆ ಆದೇಶ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಜಿಲ್ಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಶಿಸ್ತುಪಾಲಾನ ಮುಂಜಾಗ್ರತ ಕ್ರಮವಾಗಿ ಪರವಾನಗಿಯುಳ್ಳ ಕೋವಿ/ಆಯುಧಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

 

ಇದನ್ನೂ ಓದಿ; ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲಾನ ಮುಂಜಾಗ್ರತ ಕ್ರಮವಾಗಿ ಪರವಾನಗಿ ಹೊಂದಿರುವ ಅಧಿಕೃತ ಕೋವಿ ಮದ್ದು ಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡಬೇಕು. ಈ ಆದೇಶವು ಲೋಕಸಭಾ ಚುನಾವಣೆ ಮುಗಿಯುವವರೆಗೆ ಇರಲಿದೆ.

ಇದನ್ನೂ ಓದಿ; ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್…!; ಏಳು ಹಂತಗಳಲ್ಲಿ ಮತದಾನ, ನಿಮ್ಮ ಕ್ಷೇತ್ರದಲ್ಲಿ ಯಾವಾಗ

ಅಲ್ಲದೆ ಧಾರ್ಮಿಕ ಸಂಸ್ಥೆಗಳು, ಬ್ಯಾಂಕ್ ಗಳು, ಸರ್ಕಾರಿ, ಆರೇ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಖಾಸಗಿ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧದ ತೀರಾ ಅವಶ್ಯಕತೆ ಇದೇ ಎಂದಾದಲ್ಲಿ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ (23.03.2024 ಶನಿವಾರ) ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಹವಾಲು ಸಲ್ಲಿ ವಂತೆ ಆದೇಶಿಸಲಾಗಿದೆ.

ಶೃಂಗೇರಿ: ಗ್ರಾಮ ಪಂಚಾಯಿತಿಯ ಹೊಣೆಗೇಡಿತನಕ್ಕೆ ಶಾಲಾ ಮಕ್ಕಳ ಕುಡಿಯುವ ನೀರು, ಬಿಸಿಯೂಟಕ್ಕೆ ತೊಂದರೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ತಾಲೂಕಿನ ಗಂಡಘಟ್ಟ ಸ.ಹಿ.ಪ್ರಾ ಶಾಲೆಯ ಮಕ್ಕಳಿಗೆ ಕುಡಿಯಲು, ಬಿಸಿಯೂಟ ಹಾಗೂ ಶೌಚಾಲಯ ಬಳಕೆಗೆ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ.

ಇದನ್ನೂ ಓದಿ; ಆಧಾರ್ ಕಾರ್ಡ್ ಇದ್ರೆ 3 ತಿಂಗಳ ಕಾಲ ಈ ಸೇವೆ ಉಚಿತ; ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್

ಸುಮಾರು 150 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಗೆ ಗ್ರಾಮ ಪಂಚಾಯಿತಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು ಆದರೆ, ಕಲುಷಿತವಾಗಿರುವ ಕಾರಣ ಬಳಕೆಗೆ ಯೋಗ್ಯವಾಗಿರಲಿಲ್ಲ. ಈ ಸಂಬಂಧ ಗ್ರಾಮ ಪಂಚಾಯಿತಿಯ ಸದಸ್ಯರಾದ ಪ್ರಿಯಾ ಮಂಜುನಾಥ, ಪ್ರಶಾಂತ್ ಕೆ. ಹಾಗೂ ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಉಪೇಂದ್ರ, ಕಿರಿಯ ಸಹಾಯಕ ಇಂಜಿನಿಯರ್ ಭುವನೇಂದ್ರ ಅವರ ಸೂಚನೆ ಮೇರೆಗೆ 2022-23 ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ 1,10,000 ರೂ ಮೀಸಲಿಟ್ಟು, 300ಮೀ ದೂರದಲ್ಲಿ ಲಿಂಗಪ್ಪ ಬಿನ್ ವಿಶ್ವನಾಥಯ್ಯ ಎಂಬುವವರ ಜಮೀನಿನ ಬದಿಯಲ್ಲಿ ಅವರಲ್ಲಿ ಮನವಿ ಮಾಡಿಕೊಂಡು ಬಾವಿ ನಿರ್ಮಿಸಿದ್ದರು. ಆದರೆ ಇಲ್ಲಿನ ಮರ್ಕಲ್ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಗುತ್ತಿಗೆದಾರರಿಗೆ ಕಾಮಗಾರಿಯ ಆದೇಶವನ್ನು ನೀಡದೆ ಸತಾಯಿಸುತ್ತಾ ವರ್ಷಗಳೇ ಕಳೆದಿದೆ, ಇದನ್ನು ಪರಿಹರಿಸಬೇಕಾದ ಪಂಚಾಯಿತಿ ಅಧ್ಯಕ್ಷರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯಿತಿ ಹಣ ಪಾವತಿ ಮಾಡದೇ ಇರುವುದರಿಂದ ಬೇಸತ್ತ ಗುತ್ತಿಗೆದಾರರು ಬಿಲ್ ಆಗುವವರೆಗೆ ಬಾವಿಯ ನೀರನ್ನು ಬಳಸದಂತೆ ತಿಳಿಸಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸಮಸ್ಯೆಯಾಗಿದೆ ಎಂದು ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಆರೋಪಿಸಿದ್ದಾರೆ. ಪೋಷಕರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ; ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ!; ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್

ಈ ಹಿಂದೆ ಬಾವಿಗೆ ಮೋಟಾರ್ ಹಾಗೂ ಪೈಪ್ ಲೈನ್ ವ್ಯವಸ್ಥೆ ಗ್ರಾಮ ಪಂಚಾಯಿತಿ ವತಿಯಿಂದಲೇ ಮಾಡಿದ್ದು ಅದರಲ್ಲಿ ಭಾಗಶಃ ಬಿಲ್ ಸಹ ಆಗಿರುತ್ತದೆ, ಆಗಿ ಅನುದಾನದ ಕೊರತೆಯಿಂದ ಬಾವಿಗೆ ಬಿಲ್ ಆಗಿರಲಿಲ್ಲ. ಈಗ ದುರುದ್ದೇಶದಿಂದ ತಕರಾರು ಅರ್ಜಿ ಹಾಕಿಸಿ ತೊಂದರೆ ನೀಡಲಾಗುತ್ತಿದೆ ಎಂದು ಎಸ್ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ.

ಘಂಡಘಟ್ಟ ಶಾಲೆ ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದುಕೊಂಡಿದ್ದು, ಶಾಲೆಯ ಶಿಕ್ಷಕರು ಹಾಗೂ ಎಸ್ಡಿಎಂಸಿಯ ನಿರಂತರ ಶ್ರಮದಿಂದ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಸಹಕರಿಸಬೇಕಾದ ಪಂಚಾಯಿತಿ ಆಡಳಿತ ಅಡ್ಡಗಾಲು ಹಾಕುತ್ತಿದೆ.

ಸ್ಥಳೀಯ ಮಟ್ಟದ ಚಿಲ್ಲರೆ ರಾಜಕಾರಣವು ಮಕ್ಕಳ ಕುಡಿಯುವ ನೀರು ಹಾಗೂ ಬಿಸಿಯೂಟಕ್ಕೂ ಕಲ್ಲು ಹಾಕುವ ಮಟ್ಟಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.