ಬಾಳೆಹೊನ್ನೂರು (ಕಡಬಗೆರೆ):ಕೌಟುಂಬಿಕ ಕಲಹದ ಕಾರಣಕ್ಕೆ ನಾಡ ಬಂದೂಕಿನಿಂದ ಮೂವರ ಹತ್ಯೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಮಾಗಲುನಲ್ಲಿ ನಡೆದಿದೆ
ರತ್ನಾಕರ್ ಎಂಬುವವನಿಂದ ಈ ಕೃತ್ಯ ನಡೆದಿದ್ದು, ಸ್ಥಳೀಯ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರತ್ನಾಕರ್ ನನ್ನು ಆತನ ಹೆಂಡತಿ ಬಿಟ್ಟು ಎರಡು ವರ್ಷಗಳಾಗಿದ್ದು ಪತ್ನಿಯಿಂದ ದೂರವಿದ್ದನು.

ಆ ಸಿಟ್ಟು ಅತ್ತೆ ಮತ್ತು ನಾದಿನಿ ಮೇಲೆ ತೋರಿಸಿದ್ದು ಇಬ್ಬರನ್ನೂ ಹತ್ಯೆಗೈಯುವ ಜೊತೆಗೆ ತನ್ನ ಮಗಳನ್ನು ಸಹ ಗುಂಡಿಕ್ಕಿ ಕೊಲೆಗೈದಿರುವ ಅಮಾನವೀಯ ಕೃತ್ಯ ನಡೆದಿದೆ
ಕೃತ್ಯದ ನಂತರ ಆರೋಪಿ ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾವಿಗೆ ಶರಣಾಗುವ ಮುಂಚೆ ವಿಡಿಯೋ ಮಾಡಿದ್ದ ಆರೋಪಿ: ಮೂವರ ಕೊಲೆ ಮಾಡಿದ ಆರೋಪಿ ರತ್ನಾಕರ್ ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ವಿಡಿಯೋ ಮಾಡಿದ್ದು, ತನ್ನ ಪತ್ನಿ ದೂರವಾದ ಬಳಿಕ ಎಲ್ಲರೂ ಮಗುವಿನ ಬಳಿ ತಾಯಿಯ ಬಗ್ಗೆ ಕೇಳುತ್ತಿದ್ದಾರೆ. ಆದ್ರೆ ಆಕೆ ಬಿಟ್ಟು ಹೋಗಿ 2 ವರ್ಷ ಆಗಿದೆ. ನನ್ನ ಕುಟುಂಬದವರಿಗೆ ಯಾರಿಗೂ ತಿಳಿಸದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು 47 ಸೆಕೆಂಡ್ ಗಳ ವಿಡಿಯೋ ಮಾಡಿದ್ದಾನೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಾಳೆಹೊನ್ನೂರು ಪೊಲೀಸ್ ಠಾಣೆಯ PSI ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












