ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿಯಾದ ಉಮ್ಮರ್ ಫಾರೂಕ್ ಹಾಗೂ ಅಬ್ದುಲ್ ಅಕ್ರಂ ಬಂಧಿತ ಆರೋಪಿಗಳು.

ಇದನ್ನೂ ಓದಿ; ಜನಸಾಮಾನ್ಯರಿಗೆ ಗುಡ್ ನ್ಯೂಸ್; ಗಗನಕ್ಕೇರಿದ್ದ ಅಕ್ಕಿ ದರ ಇಳಿಕೆ

31/03/2024 ರಂದು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿ. 10,000 ರೂ ಬೆಲೆಯ ಸುಮಾರು 650 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; ಯಾವುದೇ ಪರೀಕ್ಷೆ ಇಲ್ಲದೇ ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ಉದ್ಯೋಗ; 47 ಹುದ್ದೆಗೆ ಅರ್ಜಿ ಆಹ್ವಾನ
ಇನ್ನು ಕಾರ್ಯಾಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ಗಳಾದ ಶ್ರೀನಾಥ್ ರೆಡ್ಡಿ, ಕಿಶೋರ್, ಎ.ಎಸ್.ಐ ತಿಮ್ಮಪ್ಪ, ಸಿಬ್ಬಂದಿಗಳಾದ ವೈಭವ್, ದಯಾನಂದ್, ಇಮ್ತಿಯಾಜ್ ಪಾಷಾ ಇದ್ದರು. (ವರದಿ -ತನು ಕೊಟ್ಟಿಗೆಹಾರ)
ಇದನ್ನೂ ಓದಿ; ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ
ಮೂಡಿಗೆರೆ: ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಹೆಬ್ಬರಿಗೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇದನ್ನೂ ಓದಿ; ಇಂದಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ; ಹೊಸ ಪಡಿತರ ಚೀಟಿ ಪಡೆಯಲು ಇನ್ಮುಂದೆ ಸರ್ಕಾರದ ಹೊಸ ನಿಯಮ!
ಧರ್ಮಸ್ಥಳ ದಿಂದ ದರ್ಶನ ಮುಗಿಸಿ ಬೆಂಗಳೂರಿಗೆ ಹೋಗುತ್ತಿದ್ದ ಬೊಲೆರೋ ವಾಹನ ಹಾಗೂ ಚಿಕ್ಕಮಗಳೂರಿನಿಂದ ಬಿಳಗಲಿಗೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೊಲೆರೋ ಜೀಪ್ ನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ; ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ!;ಕೃಷಿ ಭೂಮಿ ಹೊಂದಿರುವ ಈ ರೈತರಿಗೆ ಸಿಗಲಿದೆ ಸಹಾಯಧನ
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ; bsnl ಕಂಪನಿಯಲ್ಲಿ ಭರ್ಜರಿ ಉದ್ಯೋಗ; 558 ಹುದ್ದೆಗಳಿಗೆ ಅರ್ಜಿ ಅಹ್ವಾನ; 24,900-50,500 ಇದೇ ಸಂಬಳ












