ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿ ಜಯಪುರ ಗ್ರಾಮ ವ್ಯಾಪ್ತಿಯ ಮಳಿಗೆ ಸಮೀಪ ಗುರುವಾರ ಜಯಪುರ- ಕೊಪ್ಪ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಸಿ.ಇ.ಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಸೀರ್, ಸೈಯದ್ ವಸೀಂ ಬಂಧಿತ ಆರೋಪಿಗಳು.
ಇದನ್ನೂ ಓದಿ; 6 ಸಂಸ್ಥೆಗಳ 5000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ; ಯಾವುದೆಲ್ಲಾ ಸಂಸ್ಥೆಗಳಲ್ಲಿ ಹುದ್ದೆ

ಇನ್ನು ಬಂಧಿತ ಆರೋಪಿಗಳಿಂದ 02 ಕೆ.ಜಿ 150 ಗ್ರಾಂ ಗಾಂಜಾ, 3 ಮೊಬೈಲ್ ಫೋನ್ ಮತ್ತು ಬೋಲೇರೋ ವಾಹನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಉಳಿದ ಮೂವರು ಆರೋಪಿಗಳಾದ ವಿಜಯ್, ನಿಜಾಮ್, ಮಂಜ ತಲೆ ಮರೆಸಿಕೊಂಡಿದ್ದಾರೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು
ಈ ಕಾರ್ಯಾಚರಣೆಯಲ್ಲಿ ಸಿಇಎನ್ ಠಾಣೆ ಪಿಎಸ್ ಐ ವಿಶ್ವನಾಥ್, ಸಿಬ್ಬಂದಿ ಇಮ್ರಾನ್ ಖಾನ್, ರಾಜು, ಹರೀಶ್, ರಮೇಶ್, ಹರಿಪ್ರಸಾದ್, ಮಹೇಂದ್ರ ಇದ್ದರು.
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ಭೂಪ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ವ್ಯಕ್ತಿಯೋರ್ವ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ನಡೆದಿದೆ.
ರಸ್ತೆಯಲ್ಲಿ ವ್ಯಕ್ತಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದು, ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಮೇಲಕ್ಕೆ ಏಳದ ಭೂಪ, ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ವಾಹನದ ಹಾರ್ನ್ ಗೆ ಕೊನೆಗೂ ಎದ್ದ ವ್ಯಕ್ತಿ, ವಾಹನ ಹೋದ ನಂತರ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












