ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಆರೋಪ: ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಧರ್ಮ ದ್ರೋಹಿ ಎಂದು ಪೋಸ್ಟ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಮದುವೆ ಮಾಡಿಸಿರುವ ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಹಿಂದೂ ಸಂಘಟನೆಗಳು ಧರ್ಮ ದ್ರೋಹಿ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: HSRP ನಂಬರ್‌ ಪ್ಲೇಟ್‌ ಅಳವಡಿಕೆ ಮಾಡಿದವರಿಗೆ ಬಂತು ಮತ್ತೊಂದು ಸುದ್ದಿ; RC, ವಿಮೆ ಕುರಿತು ಬಿಗ್‌ ಅಪ್ಡೇಟ್


ಏನಿದು ಸ್ಟೋರಿ:
ಚಿಕ್ಕಮಗಳೂರು ನಗರದ ಪಾರಿಜಾತ ಗೋಬಿ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಪರಸ್ಪರ ಪ್ರೀತಿಸಿ ಚಿಕ್ಕಮಗಳೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿದ್ದಾರೆ. ಈ ವಿವಾಹಕ್ಕೆ ಪಾರಿಜಾತ ಗೋಬಿ ಸ್ಟಾಲ್ ಮಾಲೀಕ ಮಹೇಶ್ ಸಾಕ್ಷಿ ಸಹಿ ಹಾಕಿದ್ದಾರೆ. ಹೀಗಾಗಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಧರ್ಮ ದ್ರೋಹಿ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಹೆಣ್ಣು ಮಕ್ಕಳ ಪೋಷಕರೇ ಎಚ್ಚರಿಕೆ ಎಂದು ಪೋಸ್ಟ್:
‌ಚಿಕ್ಕಮಗಳೂರಿನ ಹೆಣ್ಣು ಮಕ್ಕಳ ಪೋಷಕರೇ ಎಚ್ಚರಿಕೆ….!! ಗೋಬಿ ಮಂಚೂರಿ ತಿನ್ನಕ್ಕೆ ಹೋಗುವ ಹೆಣ್ಣು ಮಕ್ಕಳನ್ನು ಪಾರಿಜಾತ ಗೋಬಿ ಸ್ಟಾಲ್ ಮಹೇಶ ಮುಸಲ್ಮಾನರ ಜೊತೆ ಹಿಂದೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುತ್ತಿದ್ದಾನೆ ಎಚ್ಚರವಹಿಸಿ…ಎಚ್ಚರವಹಿಸಿ…..!!!!! ಎಂದು ಫೇಸ್ಬುಕ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಇದನ್ನೂ ಓದಿ: ಬಿಜೆಪಿಯಿಂದ 6 ವರ್ಷ ಕಾಲ ಬಸನಗೌಡ ಪಾಟೀಲ್ ಉಚ್ಚಾಟನೆ!


ಮ್ಯಾರೇಜ್ ಗೆ ಸಹಿ ಹಾಕಿದ್ದವರಿಂದ ದೂರು:
ಇನ್ನು ವಿಶ್ವ ಹಿಂದೂ ಪರಿಷತ್ ಚಿಕ್ಕಮಗಳೂರು ಫೇಸ್ಬುಕ್ ನಲ್ಲಿ ಲವ್ ಜಿಹಾದ್ ಗೆ ಬೆಂಬಲ‌, ಧರ್ಮ ದ್ರೋಹಿ ಎಂದು ಪೋಸ್ಟ್ ಮಾಡಿದ್ದ ಸಂಬಂಧ ಗೋಬಿ ಸ್ಟಾಲ್ ಮಾಲೀಕ ಮಹೇಶ್ ಎನ್ನುವವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಭಜರಂಗದಳ ಜಿಲ್ಲಾ ಮುಖಂಡ ಶ್ಯಾಮ್ ಹಾಗೂ ಸಾಗರ್ ವಿರುದ್ಧ 353(1)(c), 353(2), BNS ಅಡಿ FIR ದಾಖಲಿಸಿದ್ದಾರೆ.

ಹಿಂದೂ ಸಂಘಟನೆಗಳಿಂದ ಲವ್ ಜಿಹಾದ್ ಆರೋಪ ಮಾಡಿದ್ದು, ಚಿಕ್ಕಮಗಳೂರು ನಗರದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.


ಇದನ್ನೂ ಓದಿ: ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆ!; ಸರ್ಕಾರದಿಂದ ಮಹತ್ವದ ನಿರ್ಧಾರ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.