ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಅವರ ಮನೆಯ ಅಂಗಳದಲ್ಲಿ ಶ್ರೀ ಮಠ ಶೃಂಗೇರಿ ಶ್ರೀ ಶಾರದಾ ಪೀಠದ 13ನೇ ಜಗದ್ಗುರುಗಳಾದ,ಹಾಲಾಡಿ ಒಡೆಯರೆಂದೆ ಖ್ಯಾತರಾಗಿದ್ದ ಶ್ರೀ ನರಸಿಂಹ ಭಾರತಿ ಗುರುಗಳು (ಕ್ರಿ. ಶ. 1389-1418) ಶ್ರೀ ತೀರ್ಥಮುತ್ತೂರು ಮಠದ ಶ್ರೀ ಜ್ಞಾನೇಂದ್ರ ಭಾರತಿ ಗುರುಗಳವರಿಗೆ ಭೂ ದಾನ ನೀಡಿರುವ ಶಿಲಾಶಾಸನ ಪತ್ತೆಯಾಗಿದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿದವರಿಗೆ ಬಂತು ಮತ್ತೊಂದು ಸುದ್ದಿ; RC, ವಿಮೆ ಕುರಿತು ಬಿಗ್ ಅಪ್ಡೇಟ್

ಕ್ರಿ. ಶ.1399 ಮೇ 01 ಬುಧವಾರದ ಕಾಲಘಟ್ಟಕ್ಕೆ ಸರಿಹೊಂದುವ ಶಾಸನ ಇದಾಗಿದ್ದು, ಶಾಸನದ ಮೇಲ್ಬಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರದ ಕೆತ್ತನೆ, ದೀಪದ ಕಂಬ, ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಎಡಭಾಗದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಶಾಸನವಿದ್ದು ಎತ್ತರದಲ್ಲಿ 5 ಅಡಿಗಿಂತ ಹೆಚ್ಚಿದೆ.ಇದನ್ನು ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದೆ. ಶಾಸನದಲ್ಲಿ ಹಾರದವಳ್ಳಿ ಎಂದು ಉಲ್ಲೇಖಿಸಲಾಗಿದ್ದು ಪ್ರಸ್ತುತ ಈ ಊರನ್ನು ಹೆರವಳ್ಳಿ ಎಂದು ಕರೆಯಲಾಗುತ್ತಿದೆ.

ಹಲವು ವರ್ಷಗಳ ಹಿಂದೆ ನಿಧಿಗಳ್ಳರು ಶಾಸನವನ್ನು ಆಗಿದ್ದಿದ್ದು ಶಾಸನದ ಅರ್ಧ ಭಾಗ ಕತ್ತರಿಸಲ್ಪಟ್ಟಿದೆ. ಅದನ್ನು ಜೋಡಿಸಿ ಪ್ರಶಾಂತ್ ಹೆಗ್ಡೆಯವರ ಮನೆಯವರು ಶಾಸನವನ್ನು ಸಂರಕ್ಷಣೆ ಮಾಡಿದ್ದಾರೆ ಹಾಗೂ ಇವರ ಕುಟುಂಬದವರು ಈ ಶಾಸನಕ್ಕೆ ವರ್ಷಕ್ಕೊಮ್ಮೆ ಪೂಜೆ ನಡೆಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ 6 ವರ್ಷ ಕಾಲ ಬಸನಗೌಡ ಪಾಟೀಲ್ ಉಚ್ಚಾಟನೆ!
ಈ ಶಾಸನವಿರುವ ಕುರಿತು ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಅಡಿಗರಿಂದ ಮಾಹಿತಿ ತಿಳಿದುಬಂದು, ಪಂಚಗ್ರಾಮ ಸಮುದಾಯದ ಕುರಿತು ಪಿಹೆಚ್.ಡಿ ಅಧ್ಯಯನ ಮಾಡುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ವೈಶಾಲಿ ಜಿ.ಆರ್ ಅವರು ಶಾಸನವನ್ನು ಸ್ವಚ್ಚಗೊಳಿಸಿ ಸಂಶೋಧನಾರ್ಥಿ ಶಶಿಕುಮಾರ ನಾಯ್ಕ್ ರೊಂದಿಗೆ ಪ್ರತಿ ತೆಗೆದಿದ್ದು, ಇವರ ಮಾರ್ಗ ದರ್ಶರಾದ ಪ್ರೊ. ಎಂ ಕೊಟ್ರೇಶ್, ಅಧ್ಯಕ್ಷರು ಹಾಗೂ ಹಿರಿಯ ಪ್ರಾಧ್ಯಾಪಕರು, DOSR ಇತಿಹಾಸ ಮತ್ತು ಪುರಾತತ್ವ ಇಲಾಖೆ ತುಮಕೂರು ವಿಶ್ವವಿದ್ಯಾಲಯ. ಈ ಕುರಿತು ಅಧ್ಯಯನ ನಡೆಸಿ ಮಾಹಿತಿಯನ್ನು ತಿಳಿಸಿದ್ದಾರೆ. ಸ.ಪ್ರ.ದ ಕಾಲೇಜು ವಿದ್ಯಾರ್ಥಿ ನಿಖಿತ್ ಕುಮಾರ್, ಶಿವಾನಂದ ಐತಾಳ್ ಹಾಗೂ ಶ್ರೇಯಸ್ ಕವಿಲುಕೊಡಿಗೆ ಇವರು ಸಹಕಾರ ನೀಡಿದ್ದಾರೆ.
ಈ ಶಾಸನದಲ್ಲಿ 35 ಸಾಲುಗಳು ಮೇಲ್ಭಾಗದಲ್ಲಿ ಕಂಡು ಬಂದಿದೆ. ಶಾಸನದಲ್ಲಿ ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣ ಸೇನಾಭೊವ ಹಾಗೂ ಶಂಕರನಾರಾಯಣ ಎಂಬ ಸ್ಥಳದ ಹೆಸರುಗಳ ಉಲ್ಲೇಖವಿದೆ ಎಂದು ಶಾಸನತಜ್ಞ ಬೆಂಗಳೂರಿನ ಎಸ್ ಕಾರ್ತಿಕ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ವಿತರಣೆ!; ಸರ್ಕಾರದಿಂದ ಮಹತ್ವದ ನಿರ್ಧಾರ
ಈ ಶಾಸನದ ಕುರಿತು
* ಶ್ರೀ ಶಾರದಾ ಪೀಠ ಶೃಂಗೇರಿ ಹಾಗೂ
* archaeological survey of india Mysur ಇವರಿಗೆ ಮಾಹಿತಿಯನ್ನು ನೀಡಲಾಗಿದೆ.
ಈ ಶಾಸನವು ಮಣ್ಣಿನೊಳಗೆ ಹೂತಿದೆ ಹಾಗೂ ಅಕ್ಕ ಪಕ್ಕ ಬಿಳಿಲುಗಳಿಂದ ಆವರಿಸಿದೆ. ಹಾಗಾಗಿ ASI ಇಲಾಖೆಯ ಅಧ್ಯಯನದ ನಂತರ ಹೆಚ್ಚಿನ ವಿವರ ಸಿಗಲಿದೆ.
ಶ್ರೀ ತೀರ್ಥಮುತ್ತೂರು ಮಠದ ಮೂಲ ಮಠವು ಕೆಳಮಠ ಎಂಬ ಹೆಸರಿನಲ್ಲಿ ಶ್ರೀ ಶಂಕರನಾರಾಯಣ ದೇವಸ್ಥಾನದ ಪಕ್ಕದಲ್ಲಿದ್ದು ಇದು ಪಂಚಗ್ರಾಮ ಬ್ರಾಹ್ಮಣರಿಗೆ ಸಂಬಂಧಿಸಿದ ಮಠವಾಗಿದೆ. ಈ ಶಾಸನ ದೊರಕಿದ ಹಿನ್ನೆಲೆಯಲ್ಲಿ ಪಂಚಗ್ರಾಮ ಸಮುದಾಯವು ಬಹಳ ಹರ್ಷ ವ್ಯಕ್ತಪಡಿಸಿದೆ. ಹಾಗೂ ಮಠದ ಅಧ್ಯಕ್ಷರಾದ ಅನಂತಮೂರ್ತಿ ಮಾವಿನ ಮನೆ ಇವರು ನಮ್ಮ ಶ್ರೀ ತೀರ್ಥಮುತ್ತೂರು ಮಠದ 13 ಶಾಸನಗಳನ್ನು ಸಂರಕ್ಷಿದಂತೆ ಈ ಶಾಸನದ ಸಂರಕ್ಷಣೆಯನ್ನು ಮಾಡಲು ಸರ್ಕಾರವು ಅನುಮತಿ ನೀಡಿದಲ್ಲಿ ನಮ್ಮ ಕೆಳಮಠದಲ್ಲಿ ಶಾಸನದ ಸಂರಕ್ಷಣೆ ಮಾಡುತ್ತೇವೆ. ಇದು ನಮ್ಮ ಗುರುಗಳಿಗೆ ಶ್ರೀ ಮಠ ಶೃಂಗೇರಿಯ ನಮ್ಮ ಹಾಲಾಡಿ ವಡೆಯರು ನೀಡಿದ ಭೂದಾನದ ವಿವರ ಇರುವ ಹಿನ್ನೆಲೆಯಲ್ಲಿ ಈ ಮಾತುಗಳನ್ನು ತಿಳಿಸಿದ್ದಾರೆ.
ವಿದ್ವಾನ್ ವಾಸುದೇವ ಜೋಯಿಸ್ ಹಾಲಾಡಿಯವರೂ ಕೂಡ ಈ ಶಾಸನವನ್ನು ಸಂರಕ್ಷಿಸಬೇಕೆಂದು, ಹಾಗೂ ತಮ್ಮ ಚಿಂತನೆಯಲ್ಲಿ ಇದು ಶೃಂಗೇರಿಗೆ ಸಂಬಂಧಿಸಿದ್ದು ಎಂಬುದಾಗಿ ಬಂದಿದ್ದಾಗಿ ಈ ಪೂರ್ವದಲ್ಲಿ 4-5 ವರ್ಷಗಳ ಹಿಂದೆಯೇ ಮನೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.













