ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ‘ಮಂಥನ’ ಚಿಂತನ ಮತ್ತು ವೈಚಾರಿಕ ವೇದಿಕೆಯ ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ; ನಿಮ್ಮ ಬಳಿ ಪಿಂಕ್ ನೋಟುಗಳಿದ್ದರೆ ಬದಲಿಸಿಕೊಳ್ಳಿ; 2000 ನೋಟುಗಳ ವಿನಿಮಯ ಅವಧಿ ಮತ್ತೆ ವಿಸ್ತರಣೆ

ನಿನ್ನೆ (ಸೋಮವಾರ) ಶೃಂಗೇರಿಯಲ್ಲಿ ‘ಮಂಥನ’ ಚಿಂತನ ಮತ್ತು ವೈಚಾರಿಕ ವೇದಿಕೆಯ ಅಡಿಯಲ್ಲಿ ‘ಸನಾತನ ಧರ್ಮ’ ಎಂಬ ವಿಷಯದ ಬಗ್ಗೆ ಮಂಥನ ಕಾರ್ಯಕ್ರಮವು ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ಶ್ರೀಯುತ ಚಿನ್ಮಯ ಕೃಷ್ಣರವರು ವಕ್ತಾರರಾಗಿ ಭಾಗವಹಿಸಿ ಸನಾತನ ಧರ್ಮದ ಅರ್ಥವನ್ನು ವಿವರಿಸಿ, ಧರ್ಮ ಶಬ್ದದ ವಿವಿಧ ದೃಷ್ಟಿಕೋನಗಳನ್ನು ಅನೇಕ ಉದಾಹರಣೆಗಳ ಮೂಲಕ ವಿಶ್ಲೇಷಿಸಿದರು.
ಇದನ್ನೂ ಓದಿ; ತಿಂಗಳ ಮೊದಲ ದಿನವೇ ಬ್ಯಾಡ್ ನ್ಯೂಸ್; ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ
ಸನಾತನ ಧರ್ಮ ಮೊದಲು ವೈದಿಕ ಧರ್ಮವೆಂದು ಕರೆಯಲ್ಪಟ್ಟು, ಕಾಲಕ್ರಮೇಣ ಅದನ್ನು ಹಿಂದೂ ಧರ್ಮವೆಂದು ಕರೆಯಲ್ಪಡುತ್ತಿರುವುದೆಂದು ತಿಳಿಸುತ್ತಾ, ಧರ್ಮವೆಂದರೆ ಒಳಿತನ್ನು ಬಯಸುವುದು ಮತ್ತು ಅದು ಒಂದು ಜೀವನ ಪದ್ಧತಿ ಎಂದು ಹೇಳಿದರು ಹಾಗೂ ಧರ್ಮ ಮತ್ತು ಜೀವನ ಇವೆರಡೂ ಒಟ್ಟಾಗಿ ಸಾಗಬೇಕೆಂದು ತಿಳಿಸಿದರು.
ಇನ್ನು ಚಿಂತಕರಿಂದ ಬಂದ ಅನೇಕ ಪ್ರಶ್ನೆಗಳಿಗೆ ಕಾರ್ಯಕ್ರಮದ ಅಧ್ಯಕ್ಷರಾದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಪರಿಸರ, ಮೆಣಸೆ ಶೃಂಗೇರಿ ಇಲ್ಲಿಯ ವೇದಾಂತ ವಿಭಾಗದ ಪ್ರಾಧ್ಯಾಪಕರಾದ ಡಾ. ಗಣೇಶ ಈಶ್ವರ ಭಟ್ ಮತ್ತು ಕಾರ್ಯಕ್ರಮದ ವಕ್ತಾರರು ಸೂಕ್ತ ಉತ್ತರಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯ ನುಡಿಯನ್ನಾಡಿದ ಡಾ.ಗಣೇಶ ಈಶ್ವರ ಭಟ್ ಇವರು ಸನಾತನ ಧರ್ಮ ಎಂಬ ವಿಷಯಕ್ಕೆ ಪೂರಕವಾಗಿರುವ ಅನೇಕ ವಿಚಾರಗಳನ್ನು ತಿಳಿಸಿ, ಸಮಾಜದ ವ್ಯಕ್ತಿಗಳು ಪ್ರಶ್ನಿಸುವ ಎಲ್ಲ ವಿಚಾರಗಳಿಗೆ ಉತ್ತರಿಸಬೇಕೆಂದಿಲ್ಲ ಆದರೆ ಅವರ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವ ಸಾಮರ್ಥ್ಯ ನಾವು ಗಳಿಸಿಕೊಳ್ಳಬೇಕು ಮತ್ತು ಅದಕ್ಕೆ ಈ ಮಂಥನ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳು ಸೇರಿ ವಿವಿಧ ವಿಷಯಗಳನ್ನು ಚರ್ಚಿಸೋಣ ಎಂದರು.
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಆಟೋ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿ ಹೊಡೆದು ಕಂದಕಕ್ಕೆ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರದ ಅತ್ತಿಗೆರೆ ಸಮೀಪ ನಡೆದಿದ್ದು, ಇಬ್ಬರಿಗೆ ತೀವ್ರ ಪೆಟ್ಟಾಗಿದೆ.
ಜಾವಾಗಲ್ ನಿಂದ ಬೆಳ್ತಂಗಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರ ದ ಅತ್ತಿಗೆರೆ ಸಮೀಪ ಈ ಅಪಘಾತ ನಡೆದಿದೆ. ಆಟೋದಲಿದ್ದ ಇಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಬೆಳ್ತಂಗಡಿ ತಾಲೂಕಿನ ಆಟೋ ಚಾಲಕ ನಜೀರ್ನ ಸ್ಥಿತಿ ಗಂಭೀರವಾಗಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












