ಕೊಪ್ಪ: ನಾಮಫಲಕ ಬದಲಾವಣೆ ಮಾಡುವ ನೆಪದಲ್ಲಿ ಪ್ಲಾಟ್ ಫಾರಂ ಬದಲಾವಣೆ: ಸಾರ್ವಜನಿಕರ ಆಕ್ರೋಶ

ಕೊಪ್ಪ ಬಸ್ ನಿಲ್ದಾಣದ ನಾಮಫಲಕ ಬದಲಾವಣೆ ಮಾಡುವ ನೆಪದಲ್ಲಿ ಪ್ಲಾಟ್ ಫಾರಂ ಬದಲಾವಣೆ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?


ರಾಜ್ಯದಲ್ಲಿ ಪ್ರಥಮ ಬಾರಿಗೆ ಕೊಪ್ಪದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಬಸ್ ನಿಲ್ದಾಣದ ಮೇಲ್ಚಾಚಣಿ ದುರಸ್ತಿ, ಸಾರ್ವಜನಿಕರಿಗೆ ವೀಕ್ಷಿಸಲು ಹಾಕಿದ್ದ ಟಿ.ವಿ.ವ್ಯವಸ್ಥೆ, ಬಸ್ ನಿಲ್ಲುವ ಜಾಗದಲಿ ಹಾಕಿದ್ದ ಟೈಲ್ಸ್ ಕಿತ್ತು ಹೋಗಿದ್ದು ಸೇರಿದಂತೆ ನಾಮಫಲಕಗಳು ಕಾಣುತ್ತಿರಲಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಮಾಧ್ಯಮದ ಮೂಲಕ ಮತ್ತು ಸ್ಥಳೀಯ ಆಡಳಿತ ಹಾಗೂ ಪಟ್ಟಣ ಪಂಚಾಯತಿ ಆಡಳಿತಕ್ಕೆ ಮನವಿ ಮಾಡಲಾಗಿತ್ತು.


ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ;  ಇ-ಖಾತಾ ಇಲ್ಲದವರಿಗೆ ಬಿ-ಖಾತಾ ವಿತರಣೆ


ಇದೀಗ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವ ತರಾತುರಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಾಮಫಲಕ ಬದಲಾವಣೆ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಕಡೆಗೆ ಹೋಗುವ ಬಸ್ ನಿಲ್ಲುವ 1 ನೇ ಪ್ಲಾಟ್ ಫಾರಂ ಅನ್ನು ಏಕಾಏಕಿ ಬದಲಾಯಿಸಿ 5ನೇ ನಂಬರ್ ಗೆ ವರ್ಗಾಯಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳ ಸಮಸ್ಯೆ ಉಂಟಾಗಿದೆ. ಇದರ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತಿ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದು, ಜನಸ್ನೇಹಿ ಆಡಳಿತ ನಡೆಸಬೇಕಾದ ಪಟ್ಟಣ ಪಂಚಾಯಿತಿ ಈ ಗೊಂದಲ ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂದು ಕೊಪ್ಪ ಪಟ್ಟಣ ಪಂಚಾಯತಿ ನಾಮಿನಿ ಸದಸ್ಯ ಸಂದೇಶ್, ಪಟ್ಟಣದ ವರ್ತಕ ಮತ್ತು ಉಪನ್ಯಾಸಕ ಪ್ರಕಾಶ್ ಸಿ.ಹೆಚ್, ಜೆ.ಡಿ.ಎಸ್. ನಗರ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಕಾರ್ಡೋಜ ಮತ್ತು ಸ್ಥಳೀಯ ಅಂಗಡಿಗಳ ಮಾಲೀಕರು, ಕೊಪ್ಪದ ಎಲ್ಲಾ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಪಿಯುಸಿ ಪಾಸ್‌ ಆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್; ಎಷ್ಟು ಸ್ಕಾಲರ್ಶಿಪ್‌ ಲಭ್ಯ, ಅರ್ಜಿ ಸಲ್ಲಿಕೆ ಹೇಗೆ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.