ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ನಿಂದ ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬರುವ ಬಿನ್ನಡಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ನಾಮಫಲಕ ತೆಗೆದು ಹಾಕಲಾಗಿತ್ತು. ಬಳಿಕ ರಸ್ತೆ ವಿಸ್ತರಣೆಯಾಗಿ ವರ್ಷ ಕಳೆದರೂ ನಾಮಫಲಕ ಫಲಕ ಹಾಕದೇ ಇದ್ದುದರಿಂದ ಗ್ರಾಮದ ಕಿರಣ್ ಬಿನ್ನಡಿ ಹಾಗೂ ಗ್ರಾಮಸ್ಥರು ನಾಮಫಲಕ ಫಲಕ ಅಳವಡಿಸಲು ಒತ್ತಾಯ ಮಾಡಿದ್ದರು.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ; ಈ ದಿನ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ!

ಕೊನೆಗೂ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಿನ್ನಡಿಗೆ ಸಾಗುವ ರಸ್ತೆ ಬಳಿ ನಾಮಫಲಕ ಹಾಕಲಾಗಿದೆ. ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಯಜಮಾನಿಯರಿಗೆ ಗುಡ್ ನ್ಯೂಸ್; ಈ ದಿನ 2 ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ!












