ಬಾಳೆಹೊನ್ನೂರು: ಪ್ಲಾಟ್ ಫಾರಂನಲ್ಲಿ ನಿಲ್ಲದ ಕೆಎಸ್ಆರ್ಟಿಸಿ ಬಸ್ಸುಗಳು

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿ ಸುಸಜ್ಜಿತ ಬಸ್ ಸ್ಟ್ಯಾಂಡ್ ಇದೆ, ಕುಳಿತುಕೊಳ್ಳಲು ಉತ್ತಮ ವ್ಯವಸ್ಥೆ ಇದೆ, ಮಹಿಳೆಯರಿಗೆ ವಿಶ್ರಾಂತಿ ಗೃಹವೂ ಇದೆ, ಆದರೆ ಬಹುತೇಕ ಪ್ರಯಾಣಿಕರು ಮಾತ್ರ ಅಲ್ಲಿ ಕುಳಿತುಕೊಳ್ಳದೆ ಮಳೆ ಹಾಗೂ ಬಿಸಿಲಲ್ಲಿ ನಿಂತಿರುತ್ತಾರೆ. ಅದಕ್ಕೆ ಕಾರಣ ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು, ಮೂಡಿಗೆರೆ ಭಾಗಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ಸುಗಳು ಪ್ಲಾಟ್ ಫಾರಂನಲ್ಲಿ ನಿಲ್ಲದೆ ಇರುವುದು .


ನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್; 10th, PUC ವಿದ್ಯಾರ್ಹತೆ


ಬಹುತೇಕ ಪ್ರಯಾಣಿಕರು ಸರ್ಕಾರಿ ಬಸ್ ಗಳನ್ನು ಅವಲಂಬಿಸಿರುತ್ತಾರೆ, ಅದರಲ್ಲೂ ಶಕ್ತಿ ಯೋಜನೆ ನಂತರ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ನ ಮೊರೆ ಹೋಗಿದ್ದಾರೆ, ಹಾಗಾಗಿ ಸೀಟ್ ಸಿಗುವುದು ಸಹ ಕಷ್ಟವಾಗಿದೆ.

ಶೃಂಗೇರಿ, ಕೊಪ್ಪ ಕಡೆಯಿಂದ ಚಿಕ್ಕಮಗಳೂರು ತೆರಳುವ ಹಾಗೂ ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ತೆರಳುವ ಕೆಎಸ್ಆರ್ಟಿಸಿ ಬಸ್ಸುಗಳು ಮುಖ್ಯ ರಸ್ತೆಯಿಂದ ಬಾಳೆಹೊನ್ನೂರು ಬಸ್ ಸ್ಟ್ಯಾಂಡ್ ಒಳಗೆ ಪ್ರವೇಶಿಸುತ್ತವಾದರೂ ಪ್ಲಾಟ್ ಫಾರಂನಲ್ಲಿ ನಿಲ್ಲುವುದಿಲ್ಲ, ಎಕ್ಸಿಟ್ ರಸ್ತೆ ಬಳಿ ಕೆಲವೇ ನಿಮಿಷಗಳು ಮಾತ್ರ ನಿಲ್ಲುವುದರಿಂದ ಪ್ರಯಾಣಿಕರಿಗೆ ಸಮಯದ ಕೊರತೆ ಹಾಗೂ ಸೀಟಿನ ಚಿಂತೆಯ ಕಾರಣ ಬಸ್ ಸ್ಟ್ಯಾಂಡ್ ನಲ್ಲಿ ಕೂರದೆ ಮಳೆ ಹಾಗೂ ಬಿಸಿಲಿನಲ್ಲಿಯೇ ಹೊರಗೆ ನಿಂತು ಬಸ್ ಗೆ ಕಾಯುವ ಪರಿಸ್ಥಿತಿ ಕಳೆದ ವರ್ಷಗಳಿಂದ ಇದೆ.


ನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ


ಈ ಬಗ್ಗೆ ಸಾರಿಗೆ ಇಲಾಖೆ, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಿ ಸೂಕ್ತ ಪರಿಹಾರೋಪಾಯ ಮಾಡಬೇಕಿದೆ.

ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)

📅 ದಿನಾಂಕ: 17 ಮೇ 2025
🕒 ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
📍 ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ

ಯಾರು ಭಾಗವಹಿಸಬಹುದು?
🎓 BCA / BE / / BSc / MBA ಪದವಿಧರರು
💡 ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು

ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!

ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.