ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾವೇರಿ ನೀರಿಗಾಗಿ ಕಾಫಿನಾಡಿನಲ್ಲಿ ಹೋರಾಟದ ಕಿಚ್ಚು ಭುಗಿಲೆದ್ದಿದ್ದು, ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ನಿನ್ನೆ ರಾತ್ರಿ ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಬಂದ್ ಕುರಿತು ಪೂರ್ವಭಾವಿ ಸಭೆ ನಡೆಸಿದೆ.
ಇದನ್ನೂ ಓದಿ; psi ನೇಮಕಾತಿ ಹಗರಣ; ಅಮೃತ್ ಪೌಲ್‌ಗೆ ಹೈಕೋರ್ಟ್ ನಿಂದ ಜಾಮೀನು

ಇನ್ನು ಕನ್ನಡ ಪರ ಸಂಘನೆಗಳ ಒಕ್ಕೂಟ, ದಲಿತ ಸಂಘಟನೆ, ರೈತ ಸಂಘ, ಹಸಿರು ಸೇನೆ, ರಾಜಕೀಯ ಪಕ್ಷಗಳು ಸೇರಿದಂತೆ ಹೋಟೆಲ್, ಆಟೋ, ಟ್ಯಾಕ್ಸಿ ಮಾಲೀಕರು ಕೂಡ ಬಂದ್ ಗೆ ಬೆಂಬಲ ನೀಡಲಿದೆ.

ಇದನ್ನೂ ಓದಿ; ಗೂಗಲ್‌ಗೆ 25ರ ಸಂಭ್ರಮ; ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್ ಎಂಜಿನ್
ನಾಳೆಯ ಕರ್ನಾಟಕ ಬಂದ್ ಗೆ ಜೆಡಿಎಸ್, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಂದ ಬೆಂಬಲ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭವಾಗಲಿದೆ.
ಚಿಕ್ಕಮಗಳೂರು: ರಾಷ್ಟ್ರಮಟ್ಟದ ಎನ್‌ಸಿಸಿ ಶಿಬಿರಕ್ಕೆ ಕಾಫಿನಾಡಿನ ಹುಡುಗಿ ಆಯ್ಕೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದದ ಮಾನ್ಯ ಕೆಂಚೈನ್ ಡಿ.ಜೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಎನ್‌ಸಿಸಿ ಶಿಬಿರ- ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್ ಗೆ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್ ನಿಂದ ಮಾನ್ಯ ಆಯ್ಕೆಯಾಗಿದ್ದಾರೆ. ಇವರು ನ್ಯಾಯಾಧೀಶರಾದ ಜಯಪ್ರಕಾಶ್ ದೇವವೃಂದ ಹಾಗೂ ವಿನುತಜಯಪ್ರಕಾಶ್ ರವರ ಪುತ್ರಿಯಾಗಿದ್ದು, ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದೀಗ ಶಿಬಿರದಲ್ಲಿ ಸ್ಕೀಟ್ ಶೂಟಿಂಗ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ಕೊಪ್ಪ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ | ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಮನವಿ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಅಗಳಗಂಡಿ ಗ್ರಾಮ, ಇಷ್ಟು ದಿನ ಮೂಲಸೌಕರ್ಯಗಳಿಗೆ ಹೋರಾಟ ನಡೆಸಿದ್ದಾಯ್ತು. ಈಗ ಸ್ವಚ್ಛವಾದ ಗಾಳಿಗೂ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿಯವರು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಕಂದಾಯ ಅಧಿಕಾರಿಗಳ ಕಚೇರಿ, ಅಂಚೆ ಕಛೇರಿ ಹಾಗೂ ಇಲ್ಲಿ ದೇವಸ್ಥಾನ ಸಹ ಇದ್ದು, ಗ್ರಾಮ ಪಂಚಾಯಿತಿ ಆವರಣದ ಮುಖ್ಯ ದ್ವಾರದ ಪಕ್ಕದಲ್ಲಿ ತಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುತ್ತಿದ್ದಾರೆ. ಇದು ಅವೈಜ್ಞಾನಿಕ ಕಾಮಗಾರಿಯು ಆಗಿದ್ದು ಈ ಕಾಮಗಾರಿಯ ಬಗ್ಗೆ ಯಾವುದೇ ಗ್ರಾಮಸಭೆಯಲ್ಲಿ ತೀರ್ಮಾನವಾಗದೆ ಕೇವಲ ಕೆಲವು ಸದಸ್ಯರುಗಳ ಸ್ವಹಿತಾಸಕ್ತಿಯ ಕಾಮಗಾರಿಯಾಗಿದೆ.
ಕಛೇರಿಗಳಿಗೆ ಬರುವ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಚಿಕ್ಕ ಮಕ್ಕಳು ಓದುವ ಅಂಗನವಾಡಿ, ಇದರ ಜೊತೆಗೆ ದೇವಸ್ಥಾನವೂ ಇದೆ. ಹೀಗಾಗಿ ಇವುಗಳ ಸಮೀಪದಲ್ಲಿಯೇ ನಿರ್ಮಾಣ ಮಾಡುವುದು ಬೇಡ ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು PDO ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ಕೆರೆ ಮನೆ, ಅರೇಹಳ್ಳ ವಾಸು,ಶಾಂತ ಕುಮಾರ್ ಜೈನ್,ಕೃಪಾಲ, ಮಂಜುನಾಥ್, ಹರಿಪ್ರಸಾದ್ ಬಾಚಿನಕುಡಿಗೆ ಇನ್ನಿತರರು ಇದ್ದರು















