ಕೊಪ್ಪ: ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ | ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಮನವಿ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಅಗಳಗಂಡಿ ಗ್ರಾಮ, ಇಷ್ಟು ದಿನ ಮೂಲಸೌಕರ್ಯಗಳಿಗೆ ಹೋರಾಟ ನಡೆಸಿದ್ದಾಯ್ತು. ಈಗ ಸ್ವಚ್ಛವಾದ ಗಾಳಿಗೂ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿದೆ.

 

ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಇನ್ನೂ ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಶು ವೈದ್ಯರ ಸೇವೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿಯವರು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಕಂದಾಯ ಅಧಿಕಾರಿಗಳ ಕಚೇರಿ, ಅಂಚೆ ಕಛೇರಿ ಹಾಗೂ ಇಲ್ಲಿ ದೇವಸ್ಥಾನ ಸಹ ಇದ್ದು, ಗ್ರಾಮ ಪಂಚಾಯಿತಿ ಆವರಣದ ಮುಖ್ಯ ದ್ವಾರದ ಪಕ್ಕದಲ್ಲಿ ತಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುತ್ತಿದ್ದಾರೆ. ಇದು ಅವೈಜ್ಞಾನಿಕ ಕಾಮಗಾರಿಯು ಆಗಿದ್ದು ಈ ಕಾಮಗಾರಿಯ ಬಗ್ಗೆ ಯಾವುದೇ ಗ್ರಾಮಸಭೆಯಲ್ಲಿ ತೀರ್ಮಾನವಾಗದೆ ಕೇವಲ ಕೆಲವು ಸದಸ್ಯರುಗಳ ಸ್ವಹಿತಾಸಕ್ತಿಯ ಕಾಮಗಾರಿಯಾಗಿದೆ.

 

ಇದನ್ನೂ ಓದಿ; ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ- 26.09.2023

ಕಛೇರಿಗಳಿಗೆ ಬರುವ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಚಿಕ್ಕ ಮಕ್ಕಳು ಓದುವ ಅಂಗನವಾಡಿ, ಇದರ ಜೊತೆಗೆ ದೇವಸ್ಥಾನವೂ ಇದೆ. ಹೀಗಾಗಿ ಇವುಗಳ ಸಮೀಪದಲ್ಲಿಯೇ ನಿರ್ಮಾಣ ಮಾಡುವುದು ಬೇಡ ತಕ್ಷಣವೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮಸ್ಥರು PDO ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

 

ಈ ಸಂದರ್ಭದಲ್ಲಿ ಸುರೇಶ ಕೆರೆ ಮನೆ, ಅರೇಹಳ್ಳ ವಾಸು,ಶಾಂತ ಕುಮಾರ್ ಜೈನ್,ಕೃಪಾಲ, ಮಂಜುನಾಥ್, ಹರಿಪ್ರಸಾದ್ ಬಾಚಿನಕುಡಿಗೆ ಇನ್ನಿತರರು ಇದ್ದರು

ಚಿಕ್ಕಮಗಳೂರು; ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ನಿಧನ

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅವರು ನಿನ್ನೆ ತಡರಾತ್ರಿ ಸುಮಾರು 12:15ಕ್ಕೆ ನಿಧನ ಹೊಂದಿದ್ದರು.

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ, ನೆಲ-ಜಲ ಪರವಾದ ಹೋರಾಟ ಹಾಗೂ ಸಂಘಟನಾ ಕಾರ್ಯಗಳಲ್ಲಿ ಜಿಲ್ಲೆಯ ಉದ್ದಗಲಕ್ಕೂ ಪಾದರಸದಂತೆ ಓಡಾಡಿಕೊಂಡು ಜನ ಜಾಗೃತಿ ಮತ್ತು ಅರಿವು ಮೂಡಿಸುವಲ್ಲಿ ಶ್ರಮಿಸಿದವರ ಪೈಕಿ ಅಗ್ರಗಣ್ಯರಾದವರು ತೇಗೂರು ಜಗದೀಶ್. ಇವರ ಅಕಾಲಿಕ ಮರಣದಿಂದ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.

ಜಗದೀಶ್ ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯವಾಗಿಯೇ ಇದ್ದ ಅವರು ಈಗ್ಗೆ ಕೆಲ ತಿಂಗಳ ಹಿಂದೆ ಇದ್ದಕ್ಕಿದಂತೆ ಅನಾರೋಗ್ಯಕ್ಕೀಡಾಗಿದ್ದರು. ಅವರು ಮೆದುಳು ಸಂಬಧಿ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇನ್ನು ಇವರ ಅಂತ್ಯಕ್ರಿಯೆಯನ್ನು ಇಂದು (ಬುಧವಾರ) ಮಧ್ಯಾಹ್ನ 3 ಗಂಟೆಯ ವೇಳೆಗೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ 7 ಕ್ಕೂ ಅಧಿಕ ಕಾಡಾನೆಗಳು ಕಾಣಿಸಿಕೊಂಡಿದೆ.

ಚಿಕ್ಕಮಗಳೂರು ತಾಲೂಕಿನ ಅಲ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಬಸರಹಳ್ಳಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಕಂಡುಬಂದಿದ್ದು, ಸ್ಥಳೀಯರು, ವಾಹನ ಸವಾರರು ಆತಂಕಗೊಂಡಿದ್ದಾರೆ.

ಚಿಕ್ಕಮಗಳೂರುನಿಂದ ಶೃಂಗೇರಿ ತೆರಳುವ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.